ಚಕ್ಕಮಕ್ಕಿ | ಡಿ.8ರಂದು ದಾರುಲ್ ಬಯಾನ್ ಖಲಂದರಿಯಾ ಸಂಸ್ಥೆಯಲ್ಲಿ ಸಿಲ್ವರ್ ಜುಬಿಲಿ ಮಹಾಸಮ್ಮೇಳನ
Update: 2025-12-06 19:56 IST
ಕೊಟ್ಟಿಗೆಹಾರ : ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿಯ ದಾರುಲ್ ಬಯಾನ್ ಖಲಂದರಿಯಾ ಎಜುಕೇಷನ್ ಇನ್‌ಸ್ಟಿಟ್ಯೂಟ್ ಡಿ.8ರಂದು ಕ್ಯಾಂಪಸ್ ಆವರಣದಲ್ಲಿ ಸಿಲ್ವರ್ ಜುಬಿಲಿ ಮಹಾಸಮ್ಮೇಳನವನ್ನು ಆಯೋಜಿಸಿದೆ.
ಕಾರ್ಯಕ್ರಮ ಸಾಯಂಕಾಲ 4 ಗಂಟೆಗೆ ಆರಂಭಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಸಯ್ಯಿದುಲ್ ಉಲಮಾ ಸೈಯದ್ ಜಿಪ್ರಿ ಮುತ್ತುಕೋಯ ತಂಙಳ್, ಶೈಖುನಾ ಉಸ್ಮಾನ್ ಫೈಝಿ ತೊಡಾರು, ಮೊಯ್ದು ಫೈಝಿ ಕೊಡಗು, ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್, ನವಾಝ್ ಮನ್ನಾನಿ ಪಣವೂರು ಮತ್ತಿತರರು ಉಪಸ್ಥಿತರಿರಲಿದ್ದಾರೆ. ಸಮಾರಂಭದ ಅಂತ್ಯದಲ್ಲಿ ಶೈಖುನಾ ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ ಅವರು ದುಆ ನೆರವೇರಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.