×
Ad

ಶ್ರೀಮುರಳಿ ಅಭಿನಯದ ‘ಉಗ್ರಾಯುಧಮ್’ ಫಸ್ಟ್‌ಲುಕ್ ಬಿಡುಗಡೆ

Update: 2025-12-15 18:31 IST

credit : x/@PuneetRudranagg

ಸ್ಯಾಂಡಲ್‌ವುಡ್ ನಟ ಶ್ರೀಮುರಳಿ ಅವರ ಮುಂದಿನ ಸಿನಿಮಾ ‘ಉಗ್ರಾಯುಧಮ್‌’ನ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಸಿನಿಮಾದ ನಿರ್ದೇಶಕ ಪುನೀತ್ ರುದ್ರನಾಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

ಖ್ಯಾತ ಕನ್ನಡ ನಟ ಶ್ರೀಮುರಳಿ ಅಭಿನಯದ ಮತ್ತೊಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದೀಗ ಅವರ ಮುಂದಿನ ಸಿನಿಮಾ ‘ಉಗ್ರಾಯುಧಮ್‌’ನ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಸಿನಿಮಾದ ನಿರ್ದೇಶಕ ಪುನೀತ್ ರುದ್ರನಾಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

ಮಾತ್ರವಲ್ಲದೆ ಡಿಸೆಂಬರ್ 17ರಂದು ಮೋಷನ್ ಟೀಸರ್ ಬಿಡುಗಡೆ ಮಾಡುವುದಾಗಿ ಪುನೀತ್ ರುದ್ರನಾಗ್ ಸುದ್ದಿ ನೀಡಿದ್ದಾರೆ.

‘ಬಘೀರ’ ಸಿನಿಮಾದ ನಂತರ 200ಕ್ಕೂ ಹೆಚ್ಚು ಕತೆಗಳನ್ನು ಕೇಳಿ ‘ಉಗ್ರಾಯುಧಮ್’ ಆರಿಸಿಕೊಂಡಿರುವುದಾಗಿ ಶ್ರೀಮುರಳಿ ತಿಳಿಸಿದ್ದರು. ‘ಉಗ್ರಾಯುಧಮ್’ ಸಿನಿಮಾದಲ್ಲಿ 700 ವರ್ಷದ ಹಿಂದಿನ ಕಥೆ ಆಗಿದೆ.

ಚಿತ್ರದ ಮಹೂರ್ತದ ಸಂದರ್ಭದಲ್ಲಿ ನಿರ್ದೇಶಕ ಪುನೀತ್ ರುದ್ರನಾಗ್ ಈ ಚಿತ್ರಕ್ಕಾಗಿಯೇ 135 ಎಕರೆ ಜಾಗದಲ್ಲಿಯೇ ಸೆಟ್ ಹಾಕುವ ಯೋಜನೆ ಪ್ರಕಟಿಸಿದ್ದರು. ಚಿತ್ರದ ಬಹುತೇಕ ಚಿತ್ರೀಕರಣ ಅದೇ ಸೆಟ್‌ನಲ್ಲಿ ನಡೆಯುತ್ತದೆ ಎಂದು ತಿಳಿಸಿದ್ದರು. ಬಹುತೇಕ ಶೂಟಿಂಗ್ ಸಕಲೇಶ್‌ಪುರ ಸುತ್ತಮುತ್ತಲು ನಡೆದಿದೆ. ನಿರ್ದೇಶಕ ಪುನೀತ್ ರುದ್ರನಾಗ್ ‘ಕೆಜಿಎಫ್‌’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News