×
Ad

2025ರ ಅತಿದೊಡ್ಡ ಓಪನಿಂಗ್ ಗಳ ಸಾಲಿಗೆ ಸೇರಿದ ಧುರಂಧರ್; ದಾಖಲೆ ಮಾತ್ರ ʼಕಾಂತಾರʼಕ್ಕೆ!

Update: 2025-12-08 20:04 IST

Photo Credit : bollywoodhungama.com

ಬಾಲಿವುಡ್ ನಟ ರಣ್ವೀರ್ ಸಿಂಗ್ ನಟಿಸಿರುವ ‘ಧುರಂದರ್’ ಸಿನಿಮಾ ಮೂರು ದಿನಗಳಲ್ಲಿ 158 ಕೋಟಿ ರೂ. ಗಳಿಕೆ ಮಾಡಿದೆ. ಆದರೆ ಉತ್ತಮ ಓಪನಿಂಗ್ ವಿಚಾರದಲ್ಲಿ ಕನ್ನಡದ ‘ಕಾಂತಾರ’ ಸಿನಿಮಾದ ದಾಖಲೆ ಮೀರಿಸಲು ಸಾಧ್ಯವಾಗಿಲ್ಲ.

ಶುಕ್ರವಾರ ಬಿಡುಗಡೆಯಾಗಿರುವ ನಿರ್ದೇಶಕ ಆದಿತ್ಯ ಧಾರ್ ಅವರ ಗೂಢಾಚಾರಿಕೆ ಕುರಿತ ಕತೆ ಇರುವ ‘ಧುರಂಧರ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ವಾರಾಂತ್ಯದ ಸಿನಿಮಾಗಳ ಸಾಲಿಗೆ ಸೇರಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಬಾಲಿವುಡ್ ತಾರೆ ರಣ್ವೀರ್ ಸಿಂಗ್ ನಟನೆಯ ಸಿನಿಮಾ ಮೂರು ದಿನಗಳಲ್ಲಿ 158 ಕೋಟಿ ರೂ. ಗಳಿಕೆ ಮಾಡಿದೆ. ಆದರೆ ಉತ್ತಮ ಓಪನಿಂಗ್ ವಿಚಾರದಲ್ಲಿ ಕನ್ನಡದ ‘ಕಾಂತಾರ’ ಸಿನಿಮಾದ ದಾಖಲೆ ಮೀರಿಸಲು ಸಾಧ್ಯವಾಗಿಲ್ಲ.

ದೊಡ್ಡ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ‘ಧುರಂಧರ್’ ಉತ್ತಮ ಬಾಕ್ಸ್ ಆಫೀಸ್ ಗಳಿಕೆಯೊಂದಿಗೆ ತೆರೆಕಂಡಿದೆ. ಶುಕ್ರವಾರ ನಿಧಾನಗತಿಯ ಗಳಿಕೆ ತೋರಿಸಿದ ಸಿನಿಮಾ ಶನಿವಾರ ಮತ್ತು ರವಿವಾರ ಸ್ಫೋಟಕ ಓಪನಿಂಗ್ ದಾಖಲಿಸಿದೆ. ಇದೀಗ ಮೂರುದಿನಗಳಲ್ಲಿ ದೇಶದೊಳಗೆ ಸುಮಾರು 123.50 ಕೋಟಿ ರೂ. ಮತ್ತು ವಿದೇಶದಲ್ಲಿ 34.50 ಕೋಟಿ ರೂ. ಗಳಿಕೆ ಮಾಡಿದೆ.

ಆದರೆ ಈ ವರ್ಷವೂ ಅತಿ ದೊಡ್ಡ ಓಪನಿಂಗ್ ದಾಖಲೆ ದಕ್ಷಿಣದ ಸಿನಿಮಾಗಳಿಗೆ ಸೇರಿದೆ. ಅದರಲ್ಲೂ ಕನ್ನಡದ ‘ಕಾಂತಾರ’ ಸಿನಿಮಾ ಮೊದಲ ಸ್ಥಾನದಲ್ಲಿದೆ. ‘ಕಾಂತಾರಾ ಅಧ್ಯಾಯ 1’ ಸಿನಿಮಾ 238.25 ಕೋಟಿ ರೂ.ಗಳನ್ನು ವಾರಾಂತ್ಯದಲ್ಲಿ ಕಬಳಿಸಿತ್ತು. ಎರಡನೇ ಸ್ಥಾನದಲ್ಲಿರುವ ತಮಿಳಿನ ರಜನೀಕಾಂತ್ ನಟನೆಯ ಸಿನಿಮಾ ‘ಕೂಲಿ’ ವಾರಾಂತ್ಯದಲ್ಲಿ 231.50 ಕೋಟಿ ರೂ. ಗಳಿಕೆಯ ಸಾಧನೆ ಮಾಡಿತ್ತು. ನಂತರದ ಸ್ಥಾನದಲ್ಲಿರುವ ಬಾಲಿವುಡ್ ಸಿನಿಮಾ ‘ವಾರ್ 2’ 185.00 ಕೋಟಿ ರೂ. ಮತ್ತು ‘ಛಾವಾ’ 163.75 ಕೋಟಿ ರೂ. ವಾರಾಂತ್ಯದ ಗಳಿಕೆಯ ಸಾಧನೆ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News