‘ಧುರಂಧರ್’ ಕುರಿತ ಅನುಮಪಾ ಚೋಪ್ರಾ ವಿಮರ್ಶೆ ವೀಡಿಯೋ ಕಣ್ಮರೆ
Photo Credit : newslaundry.com
ಹಾಲಿವುಡ್ ರಿಪೋರ್ಟರ್ ಇಂಡಿಯಾದ ಸಂಪಾದಕಿ ಅನುಪಮಾ ಚೋಪ್ರಾ ಅವರ ‘ಧುರಂಧರ್’ ವಿಮರ್ಶೆಯ ವೀಡಿಯೋವನ್ನು ತೆಗೆದು ಹಾಕಲಾಗಿದೆ, ಆದರೆ ಸೂಕ್ತ ಕಾರಣಗಳನ್ನು ನೀಡಲಾಗಿಲ್ಲ.
ರಣ್ವೀರ್ ಸಿಂಗ್ ನಟನೆಯ ಕಳೆದ ವಾರ ಬಿಡುಗಡೆಯಾದ ‘ಧುರಂಧರ್’ ಸಿನಿಮಾದ ಕುರಿತು ‘ದ ಹಾಲಿವುಡ್ ರಿಪೋರ್ಟರ್ ಇಂಡಿಯಾ’ದ ಸಂಪಾದಕಿ ಅನುಪಮಾ ಚೋಪ್ರ ಬರೆದ ವಿಮರ್ಶೆಯನ್ನು ತೆಗೆದು ಹಾಕಲಾಗಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರ ವಿಮರ್ಶೆಯ ವೀಡಿಯೊ ಹುಡುಕಿದರೆ ಅದು ಮೌನವಾಗಿ ಗೌಪ್ಯ ಮೋಡ್ ಗೆ ಹೋಗಿದೆ. ಯಾವುದೇ ವಿವರಣೆಯಿಲ್ಲ, ಟಿಪ್ಪಣಿಯಿಲ್ಲ. ಆದರೆ ವೀಡಿಯೋ ಇದ್ದ ಸಾಕ್ಷ್ಯ ಮಾತ್ರ ಇದೆ.
ನಕಾರಾತ್ಮಕ ಎಂದ ಅಭಿಮಾನಿಗಳು
“ಅನುಪಮಾ ಚೋಪ್ರಾ ಅವರು ‘ಎ ಟಫ್ ಸಿಟ್’ ಎನ್ನುವ ಶೀರ್ಷಿಕೆಯಲ್ಲಿ ಅವರು ವಿಮರ್ಶೆಯನ್ನು ಮೃದುವಾಗಿ ಟೀಕಿಸಿದ್ದರು ಸಿನಿಮಾದ ಶೈಲಿ ಮತ್ತು ಸತತ ಸಾಹಸ ದೃಶ್ಯಗಳನ್ನು ಅವರು ಟೀಕಿಸಿದ್ದರು.
‘ಧುರಂದರ್’ನಲ್ಲಿ ರಣ್ವೀರ್ ಸಿಂಗ್ ಅವರ ಗೂಢಾಚಾರನ ಪಾತ್ರ ಬಹಳ ಮಾರಕ ವ್ಯಕ್ತಿಯ ಶೈಲಿಯಲ್ಲಿದೆ. ಅದಕ್ಕೆ ರಾಷ್ಟ್ರವಾದದ ಬಣ್ಣ ಬಳಿಯಲಾಗಿದೆ. ಪಾಕಿಸ್ತಾನಿ ವಿರೋಧಿ ಅಬ್ಬರದ ಡೋಸ್ ಕೊಡಲಾಗಿದೆ” ಎಂದು ವಿಮರ್ಶಿಸಿದ್ದರು.
ಆದರೂ ಅನುಪಮಾ ಅವರು ಸಿನಿಮಾವನ್ನು ಒಟ್ಟಾಗಿ ತೆಗಳಿರಲಿಲ್ಲ. ಚಿತ್ರದ ಛಾಯಾಗ್ರಹಣ ಮತ್ತು ನಿರ್ಮಾಣದ ಶೈಲಿ ಮತ್ತು ಒಟ್ಟು ಸಿನಿಮಾವನ್ನು ಅವರು ಪ್ರಶಂಸಿಸಿದ್ದಾರೆ. ಅನುಪಮಾ ತಮ್ಮ ವಿಮರ್ಶೆಯ ವೀಡಿಯೋವನ್ನು ತೆಗೆದಿರುವುದಕ್ಕೆ ಸೂಕ್ತ ಕಾರಣ ನೀಡಿಲ್ಲ.
ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿರುವಂತೆ ಅಭಿಮಾನಿಗಳು ಮತ್ತು ವರ್ಷದ ರಾಷ್ಟ್ರವಾದಿ ಸಿನಿಮಾ ಎಂದು ಹೆಗ್ಗಳಿಕೆ ಪಡೆದ ಈ ಸಿನಿಮಾದ ಪರ ಅಭಿಮಾನ ವ್ಯಕ್ತಪಡಿಸುವವರು ಈ ‘ನಕಾರಾತ್ಮಕ’ ಅಭಿಪ್ರಾಯವನ್ನು ಟೀಕಿಸಿದ್ದಾರೆ.
ಹಾಗೆ ನೋಡಿದರೆ ರಾಹುಲ್ ದೇಸಾಯಿ ಅವರ ವಿಮರ್ಶೆಯೂ ಚಿತ್ರವನ್ನು ಪ್ರಶಂಸಿಸಿರಲಿಲ್ಲ. ಪಠ್ಯರೂಪದಲ್ಲಿ ಸಿನಿಮಾವನ್ನು ಟೀಕಿಸುವುದು ಸುರಕ್ಷಿತ ಎಂದು ಅನಿಸುತ್ತದೆ. ಆ ಬಗ್ಗೆ ಯಾವುದೇ ಟೀಕೆ ವ್ಯಕ್ತವಾಗಲಿಲ್ಲ.
ಇತ್ತೀಚೆಗೆ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಒಂದು ‘ಆರ್ಪಿಎಸ್ಜಿ ಲೈಫ್ಸ್ಟೈಲ್’ ಮಾಧ್ಯಮವನ್ನು ಆರಂಭಿಸಿದೆ. ಇದು ಆರ್ಪಿ- ಸಂಜೀವ್ ಗೋಯೆಂಕಾ ಸಮೂಹದ ಭಾಗವಾಗಿದೆ. ಈ ಸಮೂಹವೇ ಸಾರೆಗಮದ ಮಾಲೀಕರು. ಸಾರೆಗಾಮ ಕಂಪನಿ ‘ಧುರಂಧರ್’ನ ಸಂಗೀತ ಪ್ರಾಯೋಜಕರು. ಹೀಗಾಗಿ ವಿಮರ್ಶೆ ತೆಗೆದಿರುವ ಬಗ್ಗೆ ಊಹಿಸಬಹುದು.
ಆದರೆ ಇದೊಂದು ಔದ್ಯಮಿಕ ನಿರ್ಧಾರವೇ ಅಥವಾ ಸಂಪಾದಕೀಯ ನಿರ್ಧಾರವೇ ಎನ್ನುವುದು ಖಚಿತವಾಗಿಲ್ಲ. ವೀಡಿಯೋ ಮಾತ್ರ ಕಣ್ಮರೆಯಾಗಿದೆ.
ಕೃಪೆ: ನ್ಯೂಸ್ಲಾಂಡ್ರಿ