×
Ad

‘Toxic’ ಟೀಸರ್ ಬಿಡುಗಡೆ; ಐವರು ನಾಯಕಿಯರ ಎಂಟ್ರಿ!

Update: 2026-07-01 18:53 IST


ನಟ ಯಶ್ |Photo Credit : @TheNameIsYash

ನಿರ್ದೇಶಕಿ ಗೀತು ಮೋಹನ್ದಾಸ್ ಅವರು ‘ಟಾಕ್ಸಿಕ್’ ಸಿನಿಮಾದ ಟೀಸರ್ನಲ್ಲಿ ನಾಯಕಿ ನಟಿಯರ ಆಕ್ಷನ್ ಪಾತ್ರಗಳ ಪರಿಚಯವನ್ನು ನೀಡಿದ್ದಾರೆ.

ಖ್ಯಾತ ನಟ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಟೀಸರ್ ಬಿಡುಗಡೆಯಾಗಿದೆ. ಆಗಸ್ಟ್ 26ರಂದು ಬಿಡುಗಡೆಯಾಗುವ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಬಿಡುಗಡೆಯಾಗಿರುವ ಟೀಸರ್ನಲ್ಲಿ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗೆ ನಟಿಸಿರುವ ನಾಯಕಿಯರನ್ನು ಪರಿಚಯಿಸಲಾಗಿದೆ.

ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ನಟ ಯಶ್ ಪೋಸ್ಟ್ ಒಂದನ್ನು ಹಂಚಿಕೊಂಡು “ನಿಧಾನವಾಗಿ... ಸಾಮಾಧಾನವಾಗಿರಿ... ಹೆಣ್ಣು ಮಕ್ಕಳು ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ನೀವು ಸ್ವಲ್ಪ ಬಿಡುವು ಮಾಡಿಕೊಂಡು ಬನ್ನಿ” ಎಂದು ಬರೆದಿದ್ದರು. ಅಲ್ಲದೆ ಬುಧವಾರ ಟೀಸರ್ ಬಿಡುಗಡೆ ಮಾಡುವುದಾಗಿ ಅಪ್ಡೇಟ್ ಕೊಟ್ಟಿದ್ದರು. ಇದೀಗ ಬುಧವಾರ ಬೆಳಿಗ್ಗೆ ‘ಟಾಕ್ಸಿಕ್’ ಸಿನಿಮಾದ ಐವರು ನಾಯಕಿಯರನ್ನು ಪರಿಚಯಿಸುವ ದೃಶ್ಯಗಳಿರುವ ಟೀಸರ್ ಬಿಡುಗಡೆ ಮಾಡಲಾಗಿದೆ.

ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ನಾಯಕಿ ನಟಿಯರ ಆಕ್ಷನ್ ಪಾತ್ರಗಳ ಪರಿಚಯವನ್ನು ಸಖತ್ ಆಗಿಯೇ ಬಹಿರಂಗಪಡಿಸಿದ್ದಾರೆ. ನಾಯಕಿಯರಾದ ನಯನತಾರಾ, ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರುಕ್ಮಣಿ ವಸಂತ್ ‘ಮೆಲ್ಲಿಸಾ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾರಾ ಸುತಾರಿಯಾ ಅವರು ‘ರೆಬೆಕ್ಕಾ’ ಪಾತ್ರದಲ್ಲಿ ಮಿಂಚಲಿದ್ದಾರೆ.

ಟೀಸರ್ ನಲ್ಲಿ ತಾರಾ ಅವರು ಗನ್ ಹಿಡಿದು ಯಶ್ ಕಡೆಗೆ ಗುರಿ ಮಾಡಿರುವುದನ್ನು ಕಾಣಬಹುದು. ಖ್ಯಾತ ನಟಿ ನಯನತಾರಾ ಅವರು ‘ಗಂಗಾ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಯನತಾರ ಅವರ ಕೈಯಲ್ಲೂ ಬಂದೂಕು ಕಾಣಬಹುದಾಗಿದೆ.

ಹುಮಾ ಖುರೇಶಿ ಅವರು ‘ಎಲಿಜಬೆತ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅವರು ‘ನಾಡಿಯಾ’ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News