×
Ad

ಪುತ್ತೂರು| ವಾಹನದಿಂದ ರಸ್ತೆಗೆ ಚೆಲ್ಲಿದ ಆಯಿಲ್: ಸ್ಕಿಡ್ ಆಗಿ ಬಿದ್ದ ಹಲವು ದ್ವಿಚಕ್ರ ವಾಹನಗಳು

Update: 2025-08-29 18:44 IST

ಪುತ್ತೂರು: ವಾಹನವೊಂದು‌ ರಸ್ತೆಯಲ್ಲಿ‌ ಚಲಿಸುತ್ತಿದ್ದ ಸಂದರ್ಭದಲ್ಲಿ ಅದರಿಂದ ಆಯಿಲ್ ರಸ್ತೆಗೆ ಚೆಲ್ಲಿ ಹಲವು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಉರುಳಿ ಬಿದ್ದ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ.

ಪುತ್ತೂರು ನಗರದಲ್ಲಿ ಹಾಗೂ ನಗರದ ಹೊರ ವಲಯದ ಸಂಪ್ಯ ಸಮೀಪದ ಹೆದ್ದಾರಿಯ ರಸ್ತೆಯಲ್ಲಿ ಆಯಿಲ್ ಚೆಲ್ಲಿದ ಪರಿಣಾಮದಿಂದ ಸುಮಾರು 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಉರುಳಿ ಬಿದ್ದಿರುವ ಬಗ್ಗೆ ವರದಿಯಾ ಗಿದೆ. ಈ ಘಟನೆಗಳಿಂದ ಕೆಲವು ದ್ವಿಚಕ್ರ ವಾಹನ ಸವಾರರಿಗೆ ಗಾಯಗಳಾಗಿದ್ದು. ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಪುತ್ತೂರು ನಗರದ ಕಲ್ಲಾರೆ ಧನ್ವಂತರಿ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಇಂಟರ್ ಲಾಕ್ ಅಳವಡಿಸಲಾದ ಪ್ರದೇಶದಲ್ಲಿ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದು, ನಗರದ ಏಳ್ಮುಡಿ, ಹೊರವಲಯದ ಕಮ್ಮಾಡಿ ಮಿಲ್‌ನಿಂದ ಮುಂದೆ ಇಳಿಜಾರಾಗಿರುವ ಹೆದ್ದಾರಿಯಲ್ಲಿ ಶ್ರೀ ವೆಂಕಟೇಶ್ವರ ಸಾ ಮಿಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಹಲವು ವಾಹನಗಳು ಸ್ಕಿಡ್ ಆದ ಘಟನೆಗಳು ವರದಿಯಾಗಿವೆ.

ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಹಾಯದೊಂದಿಗೆ ರಸ್ತೆಗೆ ಫಾಮ್ ಲಿಕ್ವಿಡ್ ಬಳಸಿ ನೀರು ಹಾಯಿಸಿ ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News