×
Ad

ಮಂಗಳೂರು | ಸ್ವಯಂ ಗಾಯ ಮಾಡಿಕೊಂಡು ಹಲ್ಲೆ ಕಟ್ಟುಕತೆ ಸೃಷ್ಟಿಸಿದ ಆಟೊ ಚಾಲಕ

ಪೊಲೀಸ್ ತನಿಖೆಯಲ್ಲಿ ಬಹಿರಂಗ

Update: 2025-09-02 13:00 IST

ಮಂಗಳೂರು: ಆಟೋ ಚಾಲಕನ ಮೇಲೆ ರವಿವಾರ ರಾತ್ರಿ ನಗರದ ಫಳ್ನೀರ್ ನಲ್ಲಿ ತಂಡವೊಂದು ಹಲ್ಲೆ ನಡೆಸಿದೆ ಎಂಬುದು ಸುಳ್ಳು. ಇದು ಆಟೊ ಚಾಲಕನೇ ಸೃಷ್ಟಿಸಿದ ಕಟ್ಟು ಕಥೆ ಎಂಬ ವಿಚಾರ ಪೊಲೀಸರು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ.

ರಿಕ್ಷಾ ಚಾಲಕ ಬಶೀರ್ ಎಂಬಾತ ಪೊಲೀಸರಿಗೆ ಮಾಹಿತಿ ನೀಡುತ್ತೇನೆ ಎಂಬ ಆರೋಪದಲ್ಲಿ ಅಪರಿಚಿತ ತಂಡವೊಂದು ತನ್ನ ಹಲ್ಲೆ ನಡೆಸಿರುವುದಾಗಿ ಪೊಲೀಸ್ ದೂರು ನೀಡಿದ್ದನು.

ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದಾಗ ಅಲ್ಲಿ ಅಂತಹ ಘಟನೆ ನಡೆದಿಲ್ಲ. ಚಾಲಕನೇ ಸಾರ್ವಜನಿಕರ ಗಮನ ಸೆಳೆಯಲು ಈ ಕೃತ್ಯ ನಡೆಸಿರುವುದಾಗಿ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

ರಿಕ್ಷಾ ಚಾಲಕನು ಯಾವುದೊ ಹರಿತವಾದ ವಸ್ತುವಿನಿಂದ ಅಥವಾ ಪೆನ್ ನಿಂದ ತನ್ನ ದೇಹಕ್ಕೆ ಚುಚ್ಚಿ ಕೊಂಡು ಹಲ್ಲೆ ಪ್ರಕರಣವನ್ನು ಸೃಷ್ಟಿಸಿರುವುದಾಗಿ ಪೊಲೀಸರು ನಡೆಸಿದ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News