ಪುದು ಗ್ರಾ.ಪಂ| ದ್ವಿತೀಯ ಅವಧಿಗೆ ಅಧ್ಯಕ್ಷರಾಗಿ ರಮ್ಲಾನ್ ಮಾರಿಪ್ಪಳ್ಳ, ಉಪಾಧ್ಯಕ್ಷರಾಗಿ ರುಕ್ಸಾನ ಅಮೆಮ್ಮಾರ್ ಆಯ್ಕೆ
ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಪಂಚಾಯತ್ ಸಭಾಭವನದಲ್ಲಿ ಚುನಾವಣೆ ನಡೆಯಿತು.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಎಸ್ಡಿಪಿಐ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ದಿಸಿದ್ದು ಕಾಂಗ್ರೆಸ್ ಬೆಂಬಲಿತರಾಗಿರುವ ರಮ್ಲಾನ್ ಮಾರಿಪ್ಪಳ್ಳ ಅಧ್ಯಕ್ಷರಾಗಿ, ರುಕ್ಸಾನ ಅಮೆಮ್ಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 34 ಸದಸ್ಯ ಸ್ಥಾನದಲ್ಲಿ ಇಬ್ಬರು ಸದಸ್ಯರು ವಿದೇಶಕ್ಕೆ ತೆರಳಿರುವುದರಿಂದ 32 ಸದಸ್ಯರು ಮತದಾನದಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ ಕಾಂಗ್ರೆಸ್ ಬೆಂಬಲಿತ ರಮ್ಲಾನ್ ಮಾರಿಪ್ಲಳ್ಳ ರವರಿಗೆ 19 ಮತ, ಎಸ್ಡಿಪಿಐ ಬೆಂಬಲಿತ ಸದಸ್ಯ ಮೊಹಮ್ಮದ್ ಶಾಫಿರವರಿಗೆ 7 ಮತ, ಬಿಜೆಪಿ ಬೆಂಬಲಿತ ಸುಬ್ರಮಣ್ಯ ರಾವ್ ರವರು 6 ಮತ ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ ಕಾಂಗ್ರೆಸ್ ಬೆಂಬಲಿತ ರುಕ್ಸಾನ ಅಮೆಮ್ಮಾರ್ 19 ಮತ, ಎಸ್ಡಿಪಿಐ ಬೆಂಬಲಿತ ಖೈರುನ್ನೀಸ ರವರಿಗೆ 7 ಮತ, ಬಿಜೆಪಿ ಬೆಂಬಲಿತ ವಿದ್ಯಾರವರು 6 ಮತ ಪಡೆದರು. ಬಂಟ್ವಾಳ ತಾಲೂಕು ತಹಶೀಲ್ದಾರ್ ಜಿ ಮಂಜುನಾಥ್, ಸಹಾಯಕರಾಗಿ ಉಪ ತಹಶೀಲ್ದಾರ್ ನವೀನ್ ಇತರ ಸಿಬ್ಬಂದಿ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು.
"ಕ್ಷೇತ್ರದ ಶಾಸಕರು ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ ರವರ ಸೂಚನೆಯಂತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಫಾರೂಕು ಮತ್ತು ಕಾಂಗ್ರೆಸ್ ಬೆಂಬಲಿತ ಎಲ್ಲಾ ಸದಸ್ಯರ ಸಹಕಾರದಲ್ಲಿ ಎರಡನೇ ಬಾರಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಮಾನ ರೀತಿಯಲ್ಲಿ ಶ್ರಮಿಸುತ್ತಾ ಸೌಹಾರ್ದತೆಗಾಗಿ ಪ್ರಯತ್ನಿಸುತ್ತೇನೆ ಮಾತ್ರವಲ್ಲ ಸಾರ್ವಜನಿಕರಿಗೆ ಪಂಚಾಯತ್ ಸಿಬ್ಬಂದಿಗಳು ವಿವಿಧ ಕಡತಗಳ ವಿಲೇವಾರಿಗೆ ವಿಳಂಬ ಅಥವಾ ತೊಂದರೆ ನೀಡಿದರೆ ತಕ್ಷಣ ನನ್ನ ಗಮನಕ್ಕೆ ತರಬೇಕು ಎಂದು ಗ್ರಾಮಸ್ಥರಲ್ಲಿ ವಿನಂತಿಸುತ್ತೇನೆ. ಈ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಗ್ರಾಮಕ್ಕೆ ಸವಾಲಾದ ಕಸದ ಸಮಸ್ಯೆಯನ್ನು ಬಗೆಹರಿಸಲು ಮನೆ ಮನೆಯಿಂದ ಕಸ ಸಂಗ್ರಹಿಸಿ ವಿಲೇವಾರಿ ನಡೆಸಲು ಸೂಕ್ತ ವ್ಯವಸ್ಥೆಗೊಳಿಸಲಾಗಿತ್ತು ಇದರ ಮುಂದುವರಿದ ಭಾಗವಾಗಿ ಗ್ರಾಮದಲ್ಲಿಯೇ ಕಸವನ್ನು ವಿಂಗಡಿಸುವ ಡಂಪಿಂಗ್ ಯಾರ್ಡ್ ನ ಶೇ 70ರಷ್ಟು ಕೆಲಸ ಕಾರ್ಯ ಪೂರ್ಣ ಗೊಂಡಿದ್ದು ಈ ಅವಧಿಯಲ್ಲಿ ಈ ಇದನ್ನು ನಾಗರಿಕರಿಗೆ ಸಮರ್ಪಣೆ ಮಾಡುವ ಪ್ರಯತ್ನ ಪಡುತ್ತೇನೆ"
-ರಮ್ಲಾನ್ ಮಾರಿಪ್ಪಳ್ಳ, ಅಧ್ಯಕ್ಷರು, ಪುದು ಗ್ರಾಮ ಪಂಚಾಯತ್