ಪ್ರೊ. ಡಾ. ನಾಸಿರ್ ನಿಧನ
Update: 2025-10-20 17:59 IST
ಮಂಗಳೂರು: ಉಝ್ಬೇಕಿಸ್ತಾನದ ತಾಷ್ಕೆಂಟ್‌ನ ಐಎನ್‌ಎಚ್‌ಎ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ.ಎ.ಆರ್. ನಾಸಿರ್ (65) ಹೃದಯಾಘಾತದಿಂದ ಶನಿವಾರ ತಾಷ್ಕೆಂಟ್‌ನಲ್ಲಿ ನಿಧನರಾಗಿದ್ದಾರೆ.
ಮಂಗಳೂರಿನ ನವಭಾರತ್ ರಾತ್ರಿ ಶಾಲೆಯ ಸಂಸ್ಥಾಪಕ ಹಾಜಿ ಖಾಲಿದ್ ಮುಹಮ್ಮದ್-ಫಾತಿಮಾ ಖಾಲಿದ್ ದಂಪತಿಯ ಪುತ್ರನಾಗಿರುವ ಡಾ.ಎ.ಆರ್. ನಾಸಿರ್ ಐಎನ್‌ಎಚ್‌ಎ ವಿಶ್ವವಿದ್ಯಾನಿಲಯದಲ್ಲಿ ಹಲವು ವರ್ಷದಿಂದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ತಾಷ್ಕೆಂಟ್‌ನಲ್ಲಿ ಪತ್ನಿಯ ಜೊತೆ ವಾಸವಾಗಿದ್ದ ಅವರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಂಗಳೂರಿನ ಝೀನತ್ ಭಕ್ಷ್ ಮಸ್ಜಿದ್‌ನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.