ಕಲ್ಲೇರಿ: ವಿಧವೆಗೊಂದು ಮನೆ ಯೋಜನೆಯ 6ನೇ ಮನೆ ಹಸ್ತಾಂತರ ಕಾರ್ಯಕ್ರಮ
ಬಂಟ್ವಾಳ : ಕರಾವಳಿಯಾದ್ಯಂತ ಕಾರುಣ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ತಾಜುಲ್ ಉಲಮಾ ರಿಲೀಫ್ & ಚಾರಿಟೇಬಲ್ ಟ್ರಸ್ಟ್ (ರಿ) ದಕ್ಷಿಣ ಕನ್ನಡ ಇದರ ಮಹತ್ವಾಕಾಂಕ್ಷಿ ಯೋಜನೆಯಾದ ವಿಧವೆಗೊಂದು ಮನೆ ಯೋಜನೆಯ ಆರನೇ ಮನೆಯ ಹಸ್ತಾಂತರ ಕಾರ್ಯಕ್ರಮ ಜ.1ರಂದು ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಜನತಾ ಕಾಲನಿಯಲ್ಲಿ ನಡೆಯಿತು.
ಸಯ್ಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ದುಆ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ರಾಶಿದ್ ಅಹ್ಸನಿ ಆರೋದು, ಇಲ್ಯಾಸ್ ಸಅದಿ ಕಲ್ಲೇರಿ, ಷರೀಫ್ ಮದನಿ ಪಾಂಡವರಕಲ್ಲು ಹಾಗೂ ಮಸೂದ್ ಸಅದಿ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ವಗ್ಗ, ಕಾರ್ಯದರ್ಶಿ ರಾಝಿಕ್ ಬಿಎಂ, ಅಕ್ಷಯ ಬ್ಲಡ್ ಡೊನರ್ಸ್ ನ ಕರೀಮ್ ಕದ್ಕಾರ್, ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಮೊಯ್ದೀನ್ ಪೆರ್ನೆ ಇಲ್ಯಾಸ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.
ಶರೀಫ್ ಮದನಿ ಪಾಂಡವರಕಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.