×
Ad

ಮಂಗಳೂರು ವಿಮಾನ ನಿಲ್ದಾಣ: 8 ಇಂಡಿಗೊ ವಿಮಾನಗಳ ಯಾನ ರದ್ದು

Update: 2025-12-08 22:24 IST
ಸಾಂದರ್ಭಿಕ ಚಿತ್ರ (PTI)

ಮಂಗಳೂರು : ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ 8 ವಿಮಾನಗಳ ಸಂಚಾರ ಸೋಮವಾರ ರದ್ದಾಗಿತ್ತು.

ಮಂಗಳೂರಿಗೆ ಇಂಡಿಗೊದ ಬೆಂಗಳೂರು -ಮಂಗಳೂರು ( 6ಇ 6858)ಬೆಳಗ್ಗೆ 7:10, ಮುಂಬೈ -ಮಂಗಳೂರು(6ಇ 6674) ಬೆಳಗ್ಗೆ 8:40, ಬೆಂಗಳೂರು -ಮಂಗಳೂರು (6ಇ109) ಸಂಜೆ 5:20 ಮತ್ತು ಬೆಂಗಳೂರು -ಮಂಗಳೂರು (6ಇ6119) ರಾತ್ರಿ 10:15ಕ್ಕೆ ಆಗಮಿಸುವ ವಿಮಾನಗಳ ಸಂಚಾರ ಸೇವೆ ರದ್ದುಗೊಂಡಿವೆ.

ಮಂಗಳೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ 7:40ಕ್ಕೆ ಹೊರಡುವ ಮಂಗಳೂರು -ಬೆಂಗಳೂರು (6ಇ 306), ಬೆಳಗ್ಗೆ 9:10 ಮಂಗಳೂರು-ಮುಂಬೈ (6ಇ6205) , ಸಂಜೆ 5:50ರ ಮಂಗಳೂರು-ಬೆಂಗಳೂರು (6ಇ388), ರಾತ್ರಿ 10:45ಕ್ಕೆ ನಿರ್ಗಮಿಸುವ ಮಂಗಳೂರು-ಬೆಂಗಳೂರು (6ಇ6120) ವಿಮಾನಗಳ ಯಾನ ರದ್ದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

ಐದು ವಿಮಾನಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ ಹಾಗೂ 5 ವಿಮಾನಗಳು ನಿಗದಿತ ಸ್ಥಳಕ್ಕೆ ನಿರ್ಗಮಿಸಿದೆ.

ಐದು ವಿಮಾನಗಳು ಆಗಮಿಸಿಲ್ಲ. ಐದು ವಿಮಾನಗಳು ನಿಗದಿತ ತಾಣಕ್ಕೆ ಹೊರಟಿಲ್ಲ.

1 ವಿಮಾನ 30 ನಿಮಿಷಗಳಿಗಿಂತ ಹೆಚ್ಚು ವಿಳಂಬವಾಗಿ ಆಗಮಿಸಿದೆ ಹಾಗೂ 2 ವಿಮಾನಗಳು ಅರ್ಧ ಗಂಟೆ ವಿಳಂಬವಾಗಿ ಹೊರಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News