ಅ.16ರಿಂದ 18ರವರೆಗೆ ತಾಜುಲ್ ಉಲಮಾ ಉಳ್ಳಾಲ ತಂಙಳ್ ಉರೂಸ್
ಮಂಗಳೂರು, ಅ.12: 'ತಾಜುಲ್ ಉಲಮಾ' ಎಂಬ ಗೌರವ ನಾಮದೊಂದಿಗೆ ಹೆಸರುವಾಸಿಯಾಗಿದ್ದ ಅಸ್ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ಅವರ 10ನೆ ಉರೂಸ್ ಮುಬಾರಕ್ ಅ.16ರಿಂದ 18ರವರೆಗೆ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನ ಎಟ್ಟಿಕ್ಕುಳಂನಲ್ಲಿ ನಡೆಯಲಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಬಗ್ಗೆ ಮಾಹಿತಿ ನೀಡಿದ ಉರೂಸ್ ನ ಕರ್ನಾಟಕ ಸ್ವಾಗತ ಸಮಿತಿಯ ಮಾಧ್ಯಮ ಸಂಚಾಲಕ ಇಸ್ಮಾಯೀಲ್ ಬಿ.ಎಸ್., ತಾಜುಲ್ ಉಲಮಾರ ಪುತ್ರ, ಉಳ್ಳಾಲ ಹಾಗೂ ದ.ಕ. ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಙಳ್ ನೇತೃತ್ವದಲ್ಲಿ ಮೂರು ದಿನಗಳ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಉರೂಸ್ ನಡೆಯಲಿದೆ.
ಧಾರ್ಮಿಕ ವಿದ್ವಾಂಸರಾದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್, ರಈಸುಲ್ ಉಲಮಾ ಸುಲೈಮಾನ್ ಉಸ್ತಾದ್, ಅಸ್ಸೈಯದ್ ಕುಂಬೋಳ್ ತಂಙಳ್, ಅಸ್ಸೈಯದ್ ಅಲಿ ಬಾಫಖಿ ತಂಙಳ್, ಬದ್ರುಸ್ಸಾದಾತ್ ಅಸ್ಸೈಯದ್ ಖಲೀಲ್ ತಂಙಳ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಪೇರೋಡ್ ಉಸ್ತಾದ್, ಅಬ್ದುಲ್ ಹಕೀಂ ಅಝ್ಝರಿ ಭಾಗವಹಿಸಲಿದ್ದಾರೆ.
ಅ.18ರಂದು ಸಂಜೆ 4ಕ್ಕೆ ಭಾವೈಕ್ಯ ಸಮ್ಮೇಳನ ನಡೆಲಿದೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ರಾಜ್ಯಸಭಾ ಸಚೇತಕ, ಸಿಡಬ್ಲ್ಯುಸಿ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಕೇರಳ ವಕ್ಫ್ ಹಾಗೂ ಕ್ರೀಡಾ ಸಚಿವ ವಿ.ಅಬ್ದುರ್ರಹ್ಮಾನ್, ಕರ್ನಾಟಕದ ಸಚಿವರಾದ ಝಮೀರ್ ಅಹ್ಮದ್ ಖಾನ್, ರಹೀಂ ಖಾನ್, ಕಣ್ಣೂರು ಸಂಸದ ಕೆ.ಸುಧಾಕರನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಅಶೋಕ್ ಕುಮಾರ್ ರೈ, ಮಧುಸೂದನ, ವಿಜಿನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಡಾ.ನಿಸಾರ್ ಅಹ್ಮದ್, ಡಾ.ಅಬ್ದುಲ್ಲ ಕುಂಞಿ ಯೆನೆಪೊಯ, ಡಾ.ಯು.ಟಿ.ಇಪ್ತಿಕಾರ್ ಅಲಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕೋಶಾಧಿಕಾರಿ ಫಾರೂಕ್ ಅಬ್ಬಾಸ್ ಹಾಜಿ, ಕಾರ್ಯಕಾರಿ ಸಂಚಾಲಕ ಖಾಲಿದ್ ಹಾಜಿ ಭಟ್ಕಳ, ಸಂಚಾಲಕ ಅಬ್ಬಾಸ್ ಮದನಿ ಬಂಡಾಡಿ ಉಪಸ್ಥಿತರಿದ್ದರು.