ಜೂ.28: ಸಿಟಿಗೋಲ್ಡ್‌ನಲ್ಲಿ ವಜ್ರ-ಚಿನ್ನಾಭರಣ ಪ್ರದರ್ಶನ ಆರಂಭ
ಮಂಗಳೂರು, ಜೂ.27: ನಗರದ ಕಂಕನಾಡಿಯಲ್ಲಿರುವ ಚಿನ್ನ ಮತ್ತು ವಜ್ರಾಭರಣ ಮಳಿಗೆ ಸಿಟಿ ಗೋಲ್ಡ್‌ನಲ್ಲಿ ಜೂ.28ರಿಂದ ಜುಲೈ 28ರವರೆಗೆ ನಡೆಯುವ ಹಿಸ್ತಾರ ಶೋಕೇಸ್ ವಜ್ರಾಭರಣ ಮತ್ತು ವಿಂಟೇಜ್ ಆ್ಯಂಟಿಕ್ ಚಿನ್ನಾಭರಣ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಇದಕ್ಕೆ ಜೂ.28ರ ಸಂಜೆ 4ಕ್ಕೆ ಚಾಲನೆ ಸಿಗಲಿದೆ.
ಹಿಸ್ತಾರ ಶೋಕೇಸ್ ಪ್ರದರ್ಶನ ಪ್ರಯುಕ್ತ ಗ್ರಾಹಕರಿಗೆ ವಜ್ರಾಭರಣ ಖರೀದಿಯಲ್ಲಿ ಒಂದು ಕ್ಯಾರೆಟ್ 12,000 ರೂ.ರಿಯಾಯಿತಿ ನೀಡಲಾಗುವುದು. ಚಿನ್ನಾಭರಣ ಖರೀದಿಯಲ್ಲಿನ ಮೇಕಿಂಗ್ ಚಾರ್ಜಸ್ ಮೇಲೆ ಶೇ.55ರಷ್ಟು ರಿಯಾಯಿತಿ ನೀಡಲಾಗವುದು. ಪ್ರತಿ ಚಿನ್ನಾಭರಣ ಹಾಗೂ ವಜ್ರದ ಖರೀದಿಯ ಮೇಲೆ ಉಡುಗೊರಗಳನ್ನು ನೀಡಲಾಗುವುದು.
ಜು.28ರವರೆಗೆ ಮಂಗಳೂರು ಶೋ ರೂಂಗೆ ಭೇಟಿ ನೀಡಿ ಅತ್ಯುತ್ತಮ ಸಂಗ್ರಹಗಳ ಜೊತೆಗೆ ಪ್ರದರ್ಶನದ ವೇಳೆ ಲಭ್ಯವಿರುವ ವಿಶೇಷ ಕೊಡುಗೆಗಳನ್ನು ಪಡೆಯಬಹುದು. ದೇಶ-ವಿದೇಶಗಳಲ್ಲಿ ತಯಾರಿಸಲ್ಪಟ್ಟ ವಜ್ರಾಭರಣ ಹಾಗೂ ಚಿನ್ನಾಭರಣ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.