ಡಿ.4-10: ಮೇಲಂಗಡಿಯಲ್ಲಿ ಅನುಸ್ಮರಣಾ ಸಂಗಮ
Update: 2023-12-01 21:42 IST
ಮಂಗಳೂರು, ಡಿ.1: ಕೆಎಂಜೆ, ಎಸ್‌ವೈಎಸ್, ಎಸೆಸ್ಸೆಫ್ ಮೇಲಂಗಡಿ ಘಟಕದ ವತಿಯಿಂದ ಡಿ.4ರಿಂದ 10ರವರೆಗೆ ಮೇಲಂಗಡಿಯ ಬಿಸ್ಮಿಲ್ಲಾ ಕಾಂಪೌಂಡ್‌ನಲ್ಲಿ 7ನೆ ವಾರ್ಷಿಕ ಜಲಾಲಿಯ್ಯಾ ವಾರ್ಷಿಕ ಮತ್ತು ಅನುಸ್ಮರಣಾ ಸಂಗಮವು ಫಝಲ್ ಕೋಯಮ್ಮ ತಂಙಳ್ ಕೂರತ್‌ದುಆದೊಂದಿಗೆ ನಡೆಯಲಿದೆ.
ಡಿ.4ರಂದು ಮದನಿ ಆಲಾಪನೆ, ಬುರ್ದಾ ಮಜ್ಲಿಸ್, ಡಿ.5ರಂದು ಕಂಝುಲ್ ಜನ್ನಃ, ಡಿ.6ರಂದು ತಾಜುಲ್ ಉಲಮಾ ಮೌಲಿದ್, ಡಿ.10ರಂದು ಮುಹಿಯ್ಯುದ್ದೀನ್ ಮಾಲೆ ಆಲಾಪನೆ ನಡೆಯಲಿದೆ. ಡಿ.7ರಂದು ಡಾ. ಹುಸೈನ್ ಸಖಾಫಿ ಚುಳ್ಳಿ ಕೋಡ, ಡಿ.8ರಂದು ಟಿ.ಎಂ. ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಡಿ.9ರಂದು ನೌಫಲ್ ಸಖಾಫಿ ಕಳಸ ಅವರಿಂದ ಮತಪ್ರವಚನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.