ಬ್ಯಾಂಕ್ ಆಫ್ ಬರೋಡಾಕ್ಕೆ ಭಾರತದ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ
ಮಂಗಳೂರು, ಡಿ.12: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾವನ್ನು ಫೈನಾನ್ಷಿಯಲ್ ಟೈಮ್ಸ್ ಪ್ರಕಟಿಸುವ ದಿ ಬ್ಯಾಂಕರ್ ಪತ್ರಿಕೆಯ ಬ್ಯಾಂಕ್ ಆಫ್ ದಿ ಇಯರ್ ಅವಾರ್ಡ್ಸ್-2025 ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಘೋಷಿಸಲಾಗಿದೆ.
ಬ್ಯಾಂಕಿಂಗ್ ವಲಯಕ್ಕೆ ಬ್ಯಾಂಕ್ ಆಫ್ ಬರೋಡಾ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ಘೊಷಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದೇಬದತ್ತ ಚಾಂದ್, ಭಾರತದ ಅತ್ಯುತ್ತಮ ಬ್ಯಾಂಕ್ ಎಂಬ ಮಾನ್ಯತೆ ಬ್ಯಾಂಕ್ ಆಫ್ ಬರೋಡಾ ಅನುಸರಿಸಿದ ಸ್ಥಿರ ಮತ್ತು ನಿರಂತರ ಬೆಳವಣಿಗೆ ಹಾಗೂ ಪರಿವರ್ತನೆ ಪಯಣವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಬಲಿಷ್ಠ ಮತ್ತು ಪ್ರಗತಿಶೀಲ ಬ್ಯಾಂಕ್ ನಿರ್ಮಾಣಕ್ಕೆ ಬೇಕಾದ ಮೂಲ ತತ್ವಗಳನ್ನು ನಾವು ಬಲಪಡಿಸುತ್ತಿರುವ ಈ ಸಂದರ್ಭ ಪ್ರಶಸ್ತಿ ನಮ್ಮ ಗ್ರಾಹಕರ ನಂಬಿಕೆ, ಸಿಬ್ಬಂದಿಯ ನಿಷ್ಠೆಯನ್ನು ಪ್ರತಿಬಿಂಬಿಸಿದೆ ಎಂದರು.