×
Ad

ಬಂಟ್ವಾಳ | ಯುವತಿ ಸ್ನಾನ ಮಾಡುವಾಗ ವೀಡಿಯೊ‌ ಚಿತ್ರೀಕರಣ: ಆರೋಪಿ ಜಗದೀಪ್ ಆಚಾರ್ಯ ಪೊಲೀಸ್‌ ವಶಕ್ಕೆ

Update: 2023-08-29 20:30 IST

ಬಂಟ್ವಾಳ: ಯುವತಿಯೋರ್ವಳು ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿರುವಾಗ ಅಪರಿಚಿತ ವ್ಯಕ್ತಿ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿನ‌ ಹಂಚಿನ ಮನೆಯೊಳಗೆ ಬಚ್ಚಲು ಕೋಣೆಯಲ್ಲಿ ಸೋಮವಾರ ರಾತ್ರಿ ವೇಳೆ ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವೇಳೆ ಅಪರಿಚಿತ ವ್ಯಕ್ತಿಯೋರ್ವ ಗೋಡೆಯ ರಂದ್ರದ ಮೂಲಕ ಮೊಬೈಲ್ ನಲ್ಲಿ ಸ್ನಾನ ಮಾಡುತ್ತಿರುವುದನ್ನು ಸೆರೆ ಹಿಡಿಯುವುದು ಗಮನಕ್ಕೆ ಬಂದಿದೆ. ಯುವತಿ ಇದನ್ನು ಕಂಡು ಜೋರಾಗಿ ಬೊಬ್ಬೆ ಹಾಕಿದ್ದು, ಅಪರಿಚಿತ ಆರೋಪಿ ವ್ಯಕ್ತಿಯು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಯುವತಿಯ ಬೊಬ್ಬೆ ಕೇಳಿ ಇವಳ ತಾಯಿ ಹಾಗೂ ನೆರೆಮನೆಯವರು ಬಂದು ಆಸುಪಾಸಿನಲ್ಲಿ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ.ಆದರೆ ಆತ ಪತ್ತೆಯಾಗಿರಲಿಲ್ಲ. ಘಟನೆಯ ಬಗ್ಗೆ ಸುಷ್ಮಿತಾ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ನಗರ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಆರೋಪಿ ಪೊಲೀಸ್‌ ವಶಕ್ಕೆ?

ಸಂಶಯದ ಮೇಲೆ ಅಗ್ರಾರ್ ನಿವಾಸಿ ಜಗದೀಪ್ ಆಚಾರ್ಯ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ, ಆತ ಬಾಯಿಬಿಟ್ಟಿದ್ದಾನೆನ್ನಲಾಗಿದೆ. ಸದ್ಯ ಆತನನ್ನು ನ್ಯಾಯಾಲಯಕ್ಕೆ ಹಾಜರಿಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News