×
Ad

ರಸ್ತೆ ಡಿವೈಡರ್ ಗೆ ಬೈಕ್ ಢಿಕ್ಕಿ ಪ್ರಕರಣ: ಗಂಭೀರ ಗಾಯಗೊಂಡಿದ್ದ ಸವಾರ ಮೃತ್ಯು

Update: 2024-03-25 16:23 IST

ಕೊಣಾಜೆ:  ನಾಟೆಕಲ್ ಸಮೀಪದ ತಿಪ್ಲೆಪದವು ಎಂಬಲ್ಲಿ‌ ರಸ್ತೆ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ‌ ಘಟನೆ ಭಾನುವಾರ ರಾತ್ರಿ ಸಂಭವಿಸಿದ್ದು , ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಪಡೀಲ್ ನಿವಾಸಿ ದೀಕ್ಷಿತ್ ಎಂಬವರ ಪತ್ನಿ ಹಳೆಯಂಗಡಿ ,ತೋಕೂರು ಬಳಿಯ ನಿವಾಸಿ ಶ್ರೀನಿಧಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರವೇ ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮಂಗಳೂರಿನ ಪಚ್ಚನಾಡಿ ನಿವಾಸಿ ಯತೀಶ್‌ ದೇವಾಡಿಗ(29) ಸೋಮವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

‌ಮುಡಿಪುವಿನಲ್ಲಿ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ನಾಟೆಕಲ್ ಸಮೀಪದ ತಿಪ್ಲೆಪದವು ಅಪಾಯಕಾರಿ ತಿರುವಿನಲ್ಲಿ ರಾತ್ರಿ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಢಿಕ್ಕಿ ಹೊಡೆದು ಇಬ್ಬರೂ ರಸ್ತೆಗೆ ಎಸೆಯಲ್ಪಟ್ಡಿದ್ದರು. ಮತ್ತೊಂದು ಭಾಗದಿಂದ ಬರುತ್ತಿದ್ದ ಕಾರು ನೆಲಕ್ಕೆ ಬಿದ್ದವರ ಮೇಲೆ ಹರಿದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ದೃಶ್ಯ ಹಿಂಬಂದಿಯಿಂದ ಬರುತ್ತಿದ್ದ ಕಾರೊಂದರ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ತೋಕೂರಿನ‌ ತವರು ಮನೆಯಲ್ಲೇ ಉಳಿದಿದ್ದ ಶ್ರೀನಿಧಿಗೆ ಇಬ್ಬರು ಪುಟ್ಟ ಮಕ್ಕಳಿದ್ದು ಮನೆ ಮಗಳ ಸಾವಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯತೀಶ್ ದೇವಾಡಿಗನೂ ಪೋಷಕರಿಗೆ ಏಕೈಕ ಪುತ್ರನಾಗಿದ್ದಾನೆ .

ಈ ಬಗ್ಗೆ ದಕ್ಷಿಣಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News