ಬಾಕ್ಸಿಂಗ್: ಸಕ್ಷಮ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
Update: 2025-07-29 20:45 IST
ಮಂಗಳೂರು, ಜು.29: ಮಹಾರಾಷ್ಟ್ರದ ಲಖಾನಿ ಎಂ.ಡಿ.ಎನ್. ಫ್ಯೂಚರ್ ಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆದ 14 ವರ್ಷದ ವಯೋಮಿತಿಯ ಬಾಲಕರ 48 - 50 ವಿಭಾಗದ ಸಿಬಿಎಸ್ಸಿ ರೆನಲ್ ಲೆವೆಲ್ ಬಾಕ್ಸಿಂಗ್ ಪಂದ್ಯಾಟದಲ್ಲಿ ದೇರಳಕಟ್ಟೆಯ ಅಸ್ಸಿಸಿ ಸೆಂಟ್ರಲ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಸಕ್ಷಮ್ ಸಂತೋಷ್ ಕೋಟ್ಯಾನ್ ಬೆಳ್ಳಿಯ ಪದಕ ಗಳಿಸಿದ್ದಾರೆ.
ಇದರೊಂದಿಗೆ ಸಕ್ಷಮ್ ಸಂತೋಷ್ ಹರ್ಯಾಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಬಾಕ್ಸಿಂಗ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಸಂತೋಷ್ ಬಂಗೇರ ಮತ್ತು ಶ್ರೀಜಾ ಕೋಟ್ಯಾನ್‌ರ ಪುತ್ರ.