×
Ad

ಚಾರ್ಮಾಡಿ: ಮದ್ರಸ ಕಟ್ಟಡ ಉದ್ಘಾಟನೆ

Update: 2023-11-14 15:30 IST

ಚಾರ್ಮಾಡಿ: ಮುಹಿಯುದ್ದೀನ್ ಜುಮಾ ಮಸ್ಜಿದ್ ಜಲಾಲಿಯ ನಗರ ಚಾರ್ಮಾಡಿ ಇದರ ಅದೀನದಲ್ಲಿರುವ 'ಇಝ್ಝತ್ತುಲ್ ಇಸ್ಲಾಂ ಮದ್ರಸ' ಇದರ ನೂತನ ಮೇಲಂತಸ್ತಿನ ಮದ್ರಸದ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕ್ಕೋಯ ತಂಙಳ್ ರವರು ಇಂದು (ಮಂಗಳವಾರ) ಉದ್ಘಾಟಿಸಿದರು.

ಸಮಾರಂಭದಲ್ಲಿ ಮುಹಿಯುದ್ದೀನ್ ಜುಮಾ ಮಸ್ಜಿದ್ ಜಲಾಲಿಯ ನಗರ ಚಾರ್ಮಾಡಿ ಇದರ ಖತೀಬ್ ಸಲೀಂ ಪೈಝಿ, ಅದ್ಯಕ್ಷ ಅಬ್ದುಲ್ ಖಾದರ್ ಪಲ್ಕಾನ್, ಉಪಾಧ್ಯಕ್ಷ ಸಿದ್ದೀಕ್ ಕಲ್ಲಡ್ಕ ಹಾಗೂ ಹಸನಬ್ಬ ಚಾರ್ಮಾಡಿ, ಕಕ್ಕಿಂಜೆ ಜುಮಾ ಮಸ್ಜಿದ್ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News