×
Ad

ಮನಸ್ಸಿಗೆ ಏಕಾಗ್ರತೆ ಆಯುರ್ವೇದಿಂದ ಸಾಧ್ಯ : ಶಾಸಕ ವೇದವ್ಯಾಸ ಕಾಮತ್

Update: 2023-10-22 19:40 IST

ಮಂಗಳೂರು: ನಾವು ದೈನಂದಿನ ಬದುಕಿನಲ್ಲಿ ವಿವಿಧ ಕಾರಣಗಳಿಂದಾಗಿ ಒತ್ತಡದ ಸಮಸ್ಯೆ ಎದುರಿಸುತ್ತಿದ್ದೇವೆ. ಒತ್ತಡ ದಿಂದ ಪಾರಾಗಿ ಮನಸ್ಸಿಗೆ ಏಕಾಗ್ರತೆಯನ್ನು ಪಡೆಯಲು ಮತ್ತು ಉತ್ತಮ ಆರೋಗ್ಯಕ್ಕೆ ಆಯುರ್ವೇದ ವಿಧಾನದಲ್ಲಿ ಚಿಕಿತ್ಸೆಯ ಮೂಲಕ ಸಾಧ್ಯ ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.

ನಗರದ ಮೋರ್ಗನ್ ಗೇಟ್‌ನಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಈಝಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ರವಿವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಂಗಳೂರು ನಗರ ವೈದ್ಯಕೀಯ ಕ್ಷೇತ್ರದಲ್ಲಿ ನಾನಾ ರೀತಿಯ ಸಾಧನೆ ಮಾಡಿದೆ. ಇದೀಗ ನಗರಕ್ಕೆ ಅಗತ್ಯದ ಆಯು ರ್ವೇದ ಆಸ್ಪತ್ರೆ ಪ್ರಾರಂಭವಾಗಿದೆ.ಇಂತಹ ಕೊಡುಗೆ ನೀಡಿದ ಈಝಿ ಆಸ್ಪತ್ರೆಯ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದರು.

ಹಿಂದಿನ ರಾಜಮಹಾರಾಜರು , ಋಷಿಮುನಿಗಳು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದ ಚಿಕಿತ್ಸಾ ವ್ಯವಸ್ಥೆಯಾಗಿದೆ ಆಯುರ್ವೇದ. ದೇಶಿಯ ಚಿಕಿತ್ಸಾ ವ್ಯವಸ್ಥೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ನುಡಿದರು.

ವೈದ್ಯ ಸಾನೆ ಆಯುರ್ವೇದ ಲ್ಯಾಬೋರೇಟರೀಸ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಡಾ.ರೋಹಿತ್ ಮಾಧವ ಸಾನೆ ಅವರು ನೂತನ ಆಸ್ಪತ್ರೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ , ನೂತನ ಆಸ್ಪತ್ರೆ ಯಲ್ಲಿ ತಜ್ಞ ವೈದ್ಯರ ತಂಡ ಇದೆ. ಹೀಗಾಗಿ ಅರು ನೀಡುವ ಉತ್ತಮ ಸಲಹೆ ರೋಗಿಗಳಿಗೆ ಬೇಗನೆ ಚೇತರಿಸಿ ಕೊಳ್ಳಲು ನೆರವಾಗುತ್ತದೆ ಎಂದು ನುಡಿದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ ಆಯುರ್ವೇದ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಹೀಗಾಗಿ ನಾವು ಆಯುವೇರ್ದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.

ಈಝಿ ಆಯುರ್ವೇದ ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಿದ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ವಿ.ಹೆಬ್ಬಾರ್ ಈಜಿ ಆಯುರ್ವೇದ ಆಸ್ಪತ್ರೆಯು 55 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಎಲ್ಲಾ ರೀತಿಯ ಸೌಲಭ್ಯಗಳು, ಡಿಲಕ್ಸ್ ಕೊಠಡಿಗಳು, ಸಾಮಾನ್ಯ ವಾರ್ಡ್‌ ಗಳು, ಫಾರ್ಮಸಿ, ಆಪರೇಷನ್ ಥಿಯೇಟರ್ ಮತ್ತು ಪೂರ್ಣ ಪ್ರಮಾಣದ ಪಂಚಕರ್ಮ ಚಿಕಿತ್ಸೆಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಹಮ್ಮದ್ ಇಕ್ಬಾಲ್, ಸ್ಥಳೀಯ ಕಾರ್ಪೊರೇಟರ್ ಭಾನುಮತಿ ಪಿ.ಎಸ್,ಭಾರತ ಬೀಡಿ ವರ್ಕ್ಸ್ ಸಂಸ್ಥೆಯ ನಿರ್ದೇಶಕ ಆನಂದ ಜಿ.ಪೈ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಕಾತ್ಯಾಯಿನಿ ಹೆಬ್ಬಾರ್, ಡಾ ಅಮೃತಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ವೈದ್ಯಾಧಿಕಾರಿ ಡಾ.ರವಿಗಣೇಶ ಮೊಗ್ರ ಸ್ವಾಗತಿಸಿ, ಡಾ.ಅಶ್ವಿನ್ ವಂದಿಸಿದರು.ಬಿಂದಿಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭಕ್ಕೂ ಮೊದಲು ಸನಾತನ ನಾಟ್ಯಾಲಯಾದ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News