ದೇರಳಕಟ್ಟೆ | ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‌ಗೆ ನೂತನ ಸಾರಥಿಗಳ ಆಯ್ಕೆ
ದೇರಳಕಟ್ಟೆ : ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮಹಾಸಭೆಯು ಎ.29ರಂದು ಬದ್ಯಾರ್ ಶಂಸುಲ್ ಉಲಮಾ ಮದ್ರಸದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ದೇರಳಕಟ್ಟೆ ಜುಮಾ ಮಸೀದಿಯ ಖತೀಬರಾದ ತಾಜುದ್ದೀನ್ ರಹ್ಮಾನಿ ದುಆ ನೆರವೇರಿಸಿದರು. ಮುಫತ್ತಿಶ್ ಹಂಝ ಫೈಝಿ ಉದ್ಘಾಟಿಸಿದರು. ಅಬೂಬಕ್ಕರ್ ಸಿದ್ದೀಕ್ ರಹ್ಮಾನಿ ಸ್ವಾಗತಿಸಿ ಅಬ್ದುರ್ರಹ್ಮಾನ್ ದಾರಿಮಿ ಅಧ್ಯಕ್ಷೀಯ ಭಾಷಣ ಮಾಡಿದರು. ದೇರಳಕಟ್ಟೆ ರೇಂಜ್ ಮದ್ರಸಾ ಮ್ಯಾನೆಜ್‍ಮೆಂಟ್ ಅಧ್ಯಕ್ಷರಾದ ಅಬೂಬಕರ್ ನಾಟೆಕಲ್, ಕೊಶಾಧಿಕಾರಿ CM ಇನೊಳಿ ಹಾಗೂ ಸ್ವಾಗತ್ ಅಬೂಬಕರ್ ಹಾಜಿ ಶುಭ ಹಾರೈಸಿದರು.
ಈ ವೇಳೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಪಿ.ಎ ಝಕರಿಯಾ ಅಸ್ಲಮಿ ಮರ್ಧಾಳ, ಉಪಾಧ್ಯಕ್ಷರಾಗಿ ಅಬ್ದುಲ್ಲಾ ಫೈಝಿ ಹಾಗೂ ಇಬ್ರಾಹಿಂ ಫೈಝಿ, ಪ್ರಧಾನ ಕಾರ್ಯದರ್ಶಿಯಾಗಿ ಶಹೀರ್ ಕೌಸರಿ ವಯನಾಡ್, ಜೊತೆ ಕಾರ್ಯದರ್ಶಿಯಾಗಿ ಶಫೀಕ್ ಕೌಸರಿ ಕುಕ್ಕಾಜೆ, ಶಂಸುದ್ದೀನ್ ಹನೀಫಿ ಮರ್ಧಾಳ, ಕೋಶಾಧಿಕಾರಿಯಾಗಿ ಸ್ವಾಗತ್ ಅಬೂಬಕ್ಕರ್ ಹಾಜಿ, ಪರೀಕ್ಷಾ ಬೋರ್ಡ್ ಚೇರ್ಮ್ಯಾನ್ ಅಬ್ದುಲ್ ರಹ್ಮಾನ್ ದಾರಿಮಿ, ವೈಸ್ ಚೇರ್ಮ್ಯಾನ್ ಅಬ್ದುಲ್ ರಹ್ಮಾನ್ ಫೈಝಿ, ಅಶ್ರಫ್ ಅಝ್ಹರಿ, SKSBV ಚೇರ್ಮ್ಯಾನ್ ಜುನೈದ್ ಅಝ್ಹರಿ, ಕನ್ವೀನರ್ ಹನೀಫ್ ಅನ್ಸಾರಿ, ರಿಲೀಫ್ ಸೆಲ್ ಉಸ್ತುವಾರಿಗಳಾಗಿ ಅಬ್ದುಲ್ ರಹ್ಮಾನ್ ದಾರಿಮಿ, ತಾಜುದ್ದೀನ್ ರಹ್ಮಾನಿ, ಹನೀಫ್ ಅನ್ಸಾರಿ, ಕುರುನ್ನುಗಲ್ ಚೇರ್ಮ್ಯಾನ್ ಮುಖ್ತಾರ್ ಅನ್ಸಾರಿ, ಕನ್ವೀನರ್ ಶಿಹಾಬ್ ಅಶ್ಶಾಫಿ ಆಯ್ಕೆಯಾದರು.
ಶಹೀರ್ ಕೌಸರಿ ಧನ್ಯವಾದಗೈದರು.