ಧರ್ಮಸ್ಥಳ ಪ್ರಕರಣ: ಮಂಗಳೂರಿನ SIT ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭ
Update: 2025-07-30 20:45 IST
ಮಂಗಳೂರು, ಜು.30: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 39/2025, ಕಲಂ: 211(ಎ) BNS ಪ್ರಕರಣದ ತನಿಖೆಗಾಗಿ ರಚಿಸಲಾದ SIT (ವಿಶೇಷ ತನಿಖಾ ತಂಡ)ಯ ಸಹಾಯವಾಣಿಯನ್ನು ನಗರದ ಕದ್ರಿ ಮಲ್ಲಿಕಟ್ಟೆಯ ನಿರೀಕ್ಷಣಾ ಮಂದಿರದಲ್ಲಿ ಸ್ಥಾಪಿಸಿದೆ.
ಈ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡವನ್ನು ಸಂಪರ್ಕಿಸಲು ಅಥವಾ ಮಾಹಿತಿ ನೀಡಲು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಚೇರಿಯ ಸಹಾಯವಾಣಿ ದೂರವಾಣಿ ಸಂಖ್ಯೆ 0824-2005301, ವಾಟ್ಸ್ ಆ್ಯಪ್ ಸಂಖ್ಯೆ 8277986369. ಈ-ಮೇಲ್ ವಿಳಾಸ: sitdps@ksp.gov.in ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.