×
Ad

ಧರ್ಮಸ್ಥಳ ಪ್ರಕರಣ: ನೇತ್ರಾವತಿ ಸ್ನಾನಘಟ್ಟದ ಸಮೀಪ ಅಗೆಯಲು ಆರಂಭಿಸಿದ ಕಾರ್ಮಿಕರು

Update: 2025-07-29 13:30 IST

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸಮೀಪ ನದಿಯ ಬದಿಯಲ್ಲಿರುವ ಸ್ಥಳದಲ್ಲಿ ಸಾಕ್ಷಿ ದೂರು ದಾರ ಗುರುತಿಸಿದ ಸ್ಥಳದಲ್ಲಿ ಮೊದಲು ಅಗೆಯುವ ಕಾರ್ಯವನ್ನು ಆರಂಭಿಸಿದ್ದಾರೆ.

ಈ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಆದರೂ ಕಾರ್ಮಿಕರು ಅಗೆಯುವ ಕಾರ್ಯ ಮಾಡುತ್ತಿದ್ದಾರೆ.

ಘಟನೆಯ ಬಗ್ಗೆ ಕುತೂಹಲದಿಂದ ನೂರಾರು ಸಂಖ್ಯೆಯಲ್ಲಿ ಜನರು ನೇತ್ರಾವತಿ ಸ್ನಾನಘಟ್ಟದ ಸಮೀಪ ಸೇರಿದ್ದಾರೆ. ಒಂದು ಸ್ಥಳವನ್ನು ಅಗೆದ ಬಳಿಕ ತಂಡ ಮತ್ತೊಂದು ಸ್ಥಳಕ್ಕೆ ತೆರಳಲಿದ್ದಾರೆ.‌

ಮಧ್ಯಾಹ್ನ ಊಟದ ಸಮಯಕ್ಕೆ ಮಾತ್ರ ಈ ತಂಡ ಅರಣ್ಯದಿಂದ ಹೊರಬರುವ ನಿರೀಕ್ಷೆಯಿದೆ.

ಮೃತದೇಹ ಅಗೆಯುತ್ತಿರುವ ಸ್ಥಳಕ್ಕೆ ತನಿಖಾಧಿಕಾರಿ ಅನುಚೇತ್ ಅವರು ಆಗಮಿಸಿದ್ದಾರೆ. ಅವರ ಆಗಮನ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸ್ಥಳದಲ್ಲಿ ಕಳೆದ ಎರಡು ಗಂಟೆಗಳಿಂದ ಅಗೆಯುವಕಾರ್ಯ ನಡೆಯುತ್ತಿದ್ದು ಇದೀಗ ಒಂದು ಕಡೆ ಅಗೆತ ಪೂರ್ಣಗೊಂಡಿರುವುದಾಗಿ ತಿಳಿದು ಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News