×
Ad

ಧರ್ಮಸ್ಥಳ: ಆರನೇ ದಿನದ ಕಾರ್ಯಾಚರಣೆ ವೇಳೆ ಕಳೇಬರ ಪತ್ತೆಯಾಗಿರುವ ಶಂಕೆ

Update: 2025-08-04 16:04 IST

ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯುತ್ತಿರುವ ಮೃತದೇಹಗಳಿಗಾಗಿನ ಹುಟುಕಾಟ ಕಾರ್ಯದಲ್ಲಿ ಹೊಸ ಬೆಳವಣಿಗೆ ನಡೆದಿದ್ದು, ಸಾಕ್ಷಿ ದೂರುದಾರ ಇಂದು ಹೊಸ ಸ್ಥಳಕ್ಕೆ ಎಸ್‌ಐಟಿ ತಂಡವನ್ನು ಕರೆದೊಯ್ದಿದ್ದಾರೆ. ಅಲ್ಲಿ ಕಳೇಬರವೊಂದು ಪತ್ತೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ.

ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಲು ಅಧಿಕಾರಿಗಳು ಮುಂದಾಗಿಲ್ಲ. ಆತ ಈ ಹಿಂದೆ ಗುರುತಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸದೆ, ಹೊಸ‌ ಸ್ಥಳದಲ್ಲಿ ಹುಡುಕಾಟ ನಡೆಸುವ ವೇಳೆ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಹೊರಬರುತ್ತಿದೆ. ಬೆಳಗ್ಗೆ 11.30 ಕ್ಕೆ ಅರಣ್ಯವನ್ನು ಪ್ರವೇಶಿಸಿದ ಎಸ್.ಐ.ಟಿ ತಂಡ ನಾಲ್ಕು ಗಂಟೆಯ ವರೆಗೂ ಎಸ್.ಐ.ಟಿ ತಂಡ ಅರಣ್ಯದಿಂದ ಇನ್ನೂ ಹಿರಬಂದಿಲ್ಲ.

ಅರಣ್ಯದ ಒಳಭಾಗಕ್ಕೆ ನಾಲ್ವರು ಸಶಸ್ತ್ರ ತಂಡದ ಸದಸ್ಯರು ತೆರಳಿದ್ದಾರೆ. ಇದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಎರಡು ಮೂಟೆ ಉಪ್ಪನ್ನು ಕೊಂಡೊಯ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News