×
Ad

ಕೆ.ವಿ. ಸಹಜ್ ರಿಗೆ ಡಾಕ್ಟರೇಟ್ ಪದವಿ

Update: 2023-11-10 19:49 IST

ಮಂಗಳೂರು: ಇಲ್ಲಿನ ಪ್ರತಿಷ್ಠಿತ ನೇಶನಲ್ ಇನ್ಸಿಟ್ಯೂಟ್ ಆಪ್ ಟೆಕ್ನೊಲಾಜಿ- ಕರ್ನಾಟಕ (ಎನ್‌ಐಟಿಕೆ) ಜಲ ಸಂಬಂಧಿ ಸಂಶೋಧನೆಗಾಗಿ ಸಹಜ್ ಕೆ.ವಿ ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ.

ಜಲ ಸಂಶೋಧನೆ ಮತ್ತು ಸಾಗರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕೆ.ವಾರಿಜ ಅವರ ಉಪಸ್ಥಿತಿಯಲ್ಲಿ ನವೆಂಬರ್ 4ರಂದು ಸುರತ್ಕಲ್ ನಲ್ಲಿ ನಡೆದ ಎನ್‌ಐಟಿಕೆ 21ನೇ ಘಟಿಕೋತ್ಸವದಲ್ಲಿ ಸಹಜ್ ಕೆ.ವಿ. ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು.

ಸಹಜ್ ಅವರು ಇಲ್ಲಿನ ಕೊಟ್ಟಾರ ಪಡುಬೆಟ್ಟು ಕಾಂತಪ್ಪ ಆಲಂಗಾರು ಮತ್ತು ವಿಮಲ ಕೆ. ದಂಪತಿಯ ಸುಪುತ್ರರಾಗಿದ್ದಾರೆ.

ಸಹಜ್ ಅವರು ಪ್ರೊ. ಟಿ.ನಾಸರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಪರ್ಫೊಮೆನ್ಸ್ ಬ್ಯಾಫಲ್ಸ್ ಇನ್ ಎ ಸ್ವೇ ಎಕ್ಸೈಟೆಡ್ ಸ್ಲೋಶಿಂಗ್ ರೆಕ್ಟೆಂಗುಲರ್ ಟ್ಯಾಂಕ್ (Performance Baffles in a Sway Excited Sloshing Rectangular Tank) ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ನೀಡಲಾಗಿದೆ.

ಪಣಂಬೂರಿನ ಕೇಂದ್ರಿಯ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದು, ಗಾಂಧಿನಗರ ಗೋಕರ್ಣನಾಥ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಮತ್ತು ಸಹ್ಯಾದ್ರಿ ಕಾಲೇಜಿನಲ್ಲಿ ಎಂಟೆಕ್ ಪದವಿ ಪೂರೈಸಿದ್ದಾರೆ.

ಎನ್‌ಐಟಿಕೆ ಆಡಳಿತ ಮಂಡಳಿ ಮಾರ್ಗದರ್ಶನ ಮಾಡಿದ ಪ್ರೊ. ನಾಸರ್ ಅವರಿಗೆ ಸಹಜ್ ಅರು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News