ಪ್ರತೀ ಮದ್ರಸಾ ತರಗತಿಗಳು ಸ್ಮಾರ್ಟ್ ತರಗತಿಗಳಾಗಬೇಕು : ಜೆ.ಪಿ. ಮುಹಮ್ಮದ್ ದಾರಿಮಿ ಕಾಸರಗೋಡು
ಉಪ್ಪಿನಂಗಡಿ : ಪ್ರತೀ ಮದ್ರಸಾಗಳಲ್ಲಿಯೂ ತರಗತಿಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕು. ಆಧುನಿಕ ತಂತ್ರಜ್ಞಾನ ಬಳಸಿ ತರಗತಿಗಳು ನಡೆಸುವಂತಾಗಬೇಕು. ಅದಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಆಯಾ ಮದ್ರಸಾ ಆಡಳಿತ ಸಮಿತಿಗಳು ಒದಗಿಸಬೇಕು ಎಂದು ಸಮಸ್ತ ಮುಫತ್ತಿಶ್ ಜೆ.ಪಿ. ಮುಹಮ್ಮದ್ ದಾರಿಮಿ ಕಾಸರಗೋಡು ಅಭಿಪ್ರಾಯಪಟ್ಟರು.
SKJMCC ನಿರ್ದೇಶನದಂತೆ ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಸಮಿತಿ ವತಿಯಿಂದ ಜೂ.22ರ ರವಿವಾರ ಮಗ್ರಿಬ್ ನಮಾಝ್ ಬಳಿಕ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಮದ್ರಸ ಸಭಾಂಗಣದಲ್ಲಿ ಉಪ್ಪಿನಂಗಡಿ ರೇಂಜ್ ವ್ಯಾಪ್ತಿಯ 30 ಸಮಸ್ತ ಮದ್ರಸಗಳ ಪಧಾದಿಕಾರಿಗಳ ಅಬ್ವಾಬ್ ಮುಅಲ್ಲಿಂ ಟ್ರೈನಿಂಗ್ ಕ್ಯಾಂಪ್ ನಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉಪ್ಪಿನಂಗಡಿಯ ಮಾಲಿಕ್ ದೀನಾರ್ ಜುಮಾ ಮಸೀದಿ ಮುದರ್ರಿಸ್ ಉಸ್ತಾದ್ ಅಬ್ದುಲ್ ಸಲಾಂ ಫೈಝಿ ಪ್ರಾರ್ಥನೆ ಗೈದು, ಉದ್ಘಾಟಿಸಿದರು. ಉಪ್ಪಿನಂಗಡಿ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್ ಕೊಳ್ಳಜಾಲ್ ಅಧ್ಯಕ್ಷತೆ ವಹಿಸಿದರು. ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಇಸ್ಹಾಕ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ. ಜಿಲ್ಲಾ ಮ್ಯಾನೇಜ್ಮೆಂಟ್ ಸದಸ್ಯರಾದ ಹಮೀದ್ ಕರಾವಳಿ ಸ್ವಾಗತಿಸಿದರು. ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಅಸ್ಲಮಿ ಕರಾಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಉಪಾಧ್ಯಕ್ಷರಾದ KK ಅಬೂಬಕ್ಕರ್, ಮಾಲಿಕ್ ದೀನಾರ್ ಜುಮಾ ಮಸೀದಿ ಉಪಾಧ್ಯಕ್ಷರಾದ ಹಾರೂನ್ ಅಗ್ನಾಡಿ, ಉಪ್ಪಿನಂಗಡಿ ಕೇಂದ್ರ ಮದ್ರಸ ಸದರ್ ಉಸ್ತಾದ್ ಅಶ್ರಫ್ ಹನೀಫಿ, SKSSF ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ, ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಯೂಸುಫ್ ಹಾಜಿ ಪೆದಮಲೆ, ರೇಂಜ್ ಪರೀಕ್ಷಾ ಬೋರ್ಡ್ ಚೇರ್ ಮ್ಯಾನ್ ರಝಾಕ್ ದಾರಿಮಿ ಕರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ 30 ಮದ್ರಸಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಕೋಶಾಧಿಕಾರಿಗಳ ಸಹಿತ 150 ಮಂದಿ ಆಡಳಿತ ಸಮಿತಿ ಸದಸ್ಯರುಗಳು ಭಾಗವಹಿಸಿದ್ದರು.