×
Ad

ಫರಂಗಿಪೇಟೆ: ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕ್ಷಯ ರೋಗಿಗಳಿಗೆ ಕಿಟ್ ವಿತರಣೆ

Update: 2025-04-05 13:58 IST

ಫರಂಗಿಪೇಟೆ: ಕೇಂದ್ರ ಸರಕಾರ ನಿಕ್ಷಯ ಮಿತ್ರ ಯೋಜನೆಯಡಿ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ 31 ನೇ ಕಂತಿನ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.

ಕೆ ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆಯ ಮೆಡಿಕಲ್ ಸುಪರಿಡೆಂಟ್ ಡಾ. ಸುಮಲತಾ ಆರ್ ಶೆಟ್ಟಿ ಮಾತನಾಡಿ, ಸರಕಾರದ ಯೋಜನೆಗಳು ಜನರಿಗೆ ತಲುಪಬೇಕಾದರೆ ಸೇವಾಂಜಲಿಯಂತಹ ಸಂಘಟನೆಗಳಿಂದ ಸಾಧ್ಯ. ಔಷಧಿ ತುಂಬಾ ಮುಖ್ಯ, ವೈದ್ಯರು ಘೋಷಿಸುವ ಔಷಧಿಯನ್ನು ಸೇವಿಸಬೇಕು. ಜೊತೆಗೆ ಸರಿಯಾದ ಆಹಾರ ಸೇವನೆಯೂ ಅಗತ್ಯ ಎಂದರು.

ವೇದಿಕೆಯಲ್ಲಿ ಗಣೇಶ್ ಮೆಡಿಕಲ್ ಮಾಲಕರಾದ ವಿನಯ್ ಎನ್ ರೈ, ಕೆ.ಎಸ್ ಹೆಗ್ಡೆ ಆಸ್ಪತ್ರೆ ಯ ಸೇವಾಂಜಲಿ ಘಟಕದ ವೈದ್ಯರಾದ ಡಾ ಚೇತನ್, ತುಂಬೆಯ ಸಾರಾ ಮೊಯ್ದೀನ್, ಮಹಾಬಲ ಕುಲಾಲ್  ಉಪಸ್ಥಿತರಿದ್ದರು.

ಕೃಷ್ಣ ಕುಮಾರ್ ಪೂಂಜಾ ಸ್ವಾಗತಿಸಿದರು. ದೇವದಾಸ್ ಶೆಟ್ಟಿ ಕೊಡ್ಮನ್ ಕಾರ್ಯಕ್ರಮ ನಿರ್ವಹಿಸಿದರು.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News