ಉಳ್ಳಾಲದಲ್ಲಿ ಉಚಿತ ಫುಟ್ಬಾಲ್ ತರಬೇತಿ ಶಿಬಿರ
Update: 2024-04-21 00:00 IST
ಉಳ್ಳಾಲ: ಉಳ್ಳಾಲ ಫುಟ್ಬಾಲ್ ಅಕಾಡೆಮಿ ಹಾಗೂ ಅಲ್ಫಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭಾರತ್ ಶಾಲಾ ಮೈದಾನದಲ್ಲಿ ಬೇಸಿಗೆ ಫುಟ್ಬಾಲ್ ಉಚಿತ ತರಬೇತಿ ಶಿಬಿರ ಆರಂಭವಾಗಿದ್ದು, ಮೇ 15ರ ವರೆಗೆ ಪ್ರತಿ ದಿನ ಸಂಜೆ 3.45 ರಿಂದ 5.15ರ ವರೆಗೆ ನಡೆಯಲಿದೆ.
ಆಸಕ್ತರು ಕರ್ನಾಟಕ ಅಂಡರ್-19 ಫುಟ್ಬಾಲ್ ತಂಡ ಹಾಗೂ ವಿವಿಧ ಕ್ಲಬ್ ಗಳ ಕೋಚ್ ಆಗಿರುವ ತಮೀಮ್ ಉಳ್ಳಾಲ (ಮೊಬೈಲ್ ಸಂಖ್ಯೆ: 9972724345) ಅವರನ್ನು ಸಂಪರ್ಕಿಸಬಹುದು.