×
Ad

ಸುರತ್ಕಲ್ | ಎಂಆರ್ ಪಿಎಲ್ ನ H2S ಗ್ಯಾಸ್ ಉತ್ಪಾದನಾ ಘಟಕದಲ್ಲಿ ಗ್ಯಾಸ್ ಸೋರಿಕೆ; ಇಬ್ಬರು ಮೃತ್ಯು, ಓರ್ವ ಗಂಭೀರ

Update: 2025-07-12 11:18 IST

 ದೀಪ್‌ ಚಂದ್ರ ಭರ್‌ | ಬಿಜಿಲ್‌ ಪ್ರಸಾದ್‌  

ಸುರತ್ಕಲ್: ಇಲ್ಲಿನ ಎಚ್ 2ಎಸ್ ಗ್ಯಾಸ್ ಉತ್ಪಾದನಾ ಘಟಕದಲ್ಲಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಸುರತ್ಕಲ್ ನ ಎಂಆರ್ ಪಿಎಲ್ ನಲ್ಲಿ ಶನಿವಾರ ಬೆಳಗ್ಗೆ ವರದಿಯಾಗಿದೆ.

ಮೃತರನ್ನು ತಾಂತ್ರಿಕ ಸಹಾಯಕರಾದ ಬಿಜಿಲ್‌ ಪ್ರಸಾದ್‌ ಹಾಗೂ ದೀಪ್‌ ಚಂದ್ರ ಭರ್‌ ಎಂದು ಗುರುತಿಸಲಾಗಿದೆ. ಮತ್ತೋರ್ವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಗಂಭೀರವಾಗಿದ್ದು, ಅವರನ್ನು ನಗರದ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಎಂಆರ್ ಪಿಎಲ್ ನ OM‌‌‌‌&S ಘಟಕದ ಶೇಖರಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಮೂವರೂ OM‌‌‌‌&S ಘಟಕದ ಶೇಖರಣಾ ಪ್ರದೇಶದ ನಿರ್ವಹಣೆ ಕಾರ್ಮಿಕಾರಗಿದ್ದರು ಎಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News