×
Ad

ಜಿ ಎಸ್ ಟಿ ಸ್ಲಾಬ್ ಪರಿಷ್ಕರಣೆ: ಬಡವರ ಹೊರೆ ಕಡಿಮೆ ಮಾಡದ ಕೇಂದ್ರ ಸರ್ಕಾರ: ಝಮೀರ್ ಅಹ್ಮದ್ ಖಾನ್

Update: 2025-09-04 14:35 IST

ಬೆಂಗಳೂರು :ಕೇಂದ್ರ ಸರ್ಕಾರದ ಜಿಎಸ್ ಟಿ ಸ್ಲಾಬ್ ಪರಿಷ್ಕರಣೆ ಯಿಂದ ಕೇವಲ ಉದ್ಯಮಿಗಳಿಗೆ ಲಾಭವಾಗಲಿದ್ದು, ಬಡವರಿಗೆ ಹೆಚ್ಚಿನ ರೀತಿಯ ಉಪಯೋಗವಾಗದು ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಡವರಿಗೆ ಮನೆ ಕಟ್ಟಿ ಕೊಡುವ ವಸತಿ ಯೋಜನೆಗಳಿಗೆ ಜಿಎಸ್ ಟಿ ವಿನಾಯಿತಿ ಕೊಡಬೇಕು ಎಂದು ಕೇಂದ್ರ ಸರ್ಕಾರ ಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಬಡವರ ಹೊರೆ ಕಡಿಮೆ ಮಾಡುವ ಬದಲು ಮತ್ತಷ್ಟು ಹೆಚ್ಚು ಮಾಡಲಾಗಿದೆ. ಪ್ರಧಾನಿ ಹಾಗೂ ಹಣಕಾಸು ಸಚಿವರು ಈ ಬಗ್ಗೆ ಮತ್ತೆ ಪರಿಶೀಲನೆ ಮಾಡಿ ವಸತಿ ಯೋಜನೆಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಬಡವರ ಪರ ಕಾಳಜಿ ತೋರಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News