ಗುರುಪುರ: ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 100% ಫಲಿತಾಂಶ

Update: 2024-05-10 06:31 GMT

ಗುರುಪುರ: 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು,  ಗುರುಪುರ ತೆಂಕುಳಿಪಾಡಿಯ ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ 100% ಫಲಿತಾಂಶ ಪಡೆದಿದೆ.

ಪರೀಕ್ಷೆಗೆ ಹಾಜರಾಗಿರುವ 48 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಕ್ಷನ್ ನಲ್ಲಿ 03, ಪ್ರಥಮ ಶ್ರೇಣಿಯಲ್ಲಿ 27 ಮತ್ತು ದ್ವಿತೀಯ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  

ಗುರುಕಂಬಳ ಸಯ್ಯದ್ ಜಮಾಲ್ ಮತ್ತು ಉಡುಪಿ ಅಬ್ದುಲ್ ರಹಿಮಾನ್ ರವರ ಮೊಮ್ಮಗಳಾದ ಸಫಾ 568 ( 90.88%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಗುರುಕಂಬಳ ಸಯ್ಯದ್ ಇಸಾಕ್ ಮತ್ತು ರೆಹನಾ ದಂಪತಿಯ ಪುತ್ರಿ.

ಶಾಲೆಯ ಜಿಎಂಸಿ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ಕುಟುಂಬಸ್ಥರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News