ಖಾಲಿದ್ ಹಾಜಿ ನ್ಯೂಪಡ್ಪು ನಿಧನ
Update: 2023-10-15 12:37 IST
ಹರೇಕಳ: ನ್ಯೂಪಡ್ಪು ನಿವಾಸಿ ಬಿ ಖಾಲಿದ್ ಹಾಜಿ (67ವರ್ಷ) ನಿಧನರಾಗಿದ್ದಾರೆ.
ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಖಾಲಿದ್ ಹಾಜಿ ಅವರು, ನ್ಯೂಪಡ್ಪು ತ್ವಾಹ ಜುಮಾ ಮಸ್ಜಿದ್, ರೌಲತುಲ್ ಉಲೂಮ್ ಇದರ ಸ್ಥಾಪನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದರು.
ನ್ಯೂಪಡ್ಪು ಜಮಾಅತ್ ಅಧ್ಯಕ್ಷ, ದೇರಳಕಟ್ಟೆ ಮುಸ್ಲಿಂ ಸಂಯುಕ್ತ ಜಮಾಅತ್ ವ್ಯಾಪ್ತಿಯ ಅಧ್ಯಕ್ಷ, SMA ಕೊಣಾಜೆ ರೇಂಜ್ ಇದರ ಕೋಶಾಧಿಕಾರಿ ಹೀಗೆ ಹಲವಾರು ಸುನ್ನಿ ಸಂಘಟನೆಗಳ ನೇತೃತ್ವವನ್ನು ವಹಿಸಿದ್ದರು.
ಮೃತರು ಓರ್ವ ಪುತ್ರ, ಐವರು ಪುತ್ರಿಯರು, ಮೊಮ್ಮಕ್ಕಳು, ಅಳಿಯಂದಿರು, ಬಂಧು ಬಳಗ, ಮತ್ತು ಸಂಘಟನಾತ್ಮಕ ಮಿತ್ರರನ್ನು ಆಗಲಿದ್ದಾರೆ.
ಇವರ ಅಗಲಿಕೆಗೆ ತ್ವಾಹ ಜುಮಾ ಮಸ್ಜಿದ್ ಆಡಳಿತ ಕಮಿಟಿ, ಖಿಯಾ ಕಮಿಟಿ, KMJ, SYS, SSF, SKSSF ಮತ್ತು SDPI ನ್ಯೂಪಡ್ಪು ಘಟಕ ಸಂತಾಪವನ್ನು ಸೂಚಿಸಿದೆ.