ಹರೇಕಳ: ಶಿಕ್ಷಕಿ ಉಷಾ ಲತಾ ನಿಧನ
Update: 2025-05-06 09:26 IST
ಕೊಣಾಜೆ: ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ , ಅತ್ತಾವರ ನಿವಾಸಿ ಉಷಾ ಲತಾ( 59) ಅವರು ಸೊಮವಾರದಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಕಳೆದ 35 ವರ್ಷಗಳಿಂದ ಹರೇಕಳದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಮುಂದಿನ ತಿಂಗಳಲ್ಲಿ ವೃತ್ತಿಯಿಂದ ನಿವೃತ್ತರಾಗಲಿದ್ದರು.
ಮೃತರು ಪತಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.