×
Ad

ಅಡ್ಕರೆಪಡ್ಪು: ಮುಹ್ಯಿದ್ದೀನ್ ಜುಮಾ ಮಸ್ಜಿದ್ ಹಾಗೂ ರಹ್ಮಾನಿಯ್ಯ ಮದ್ರಸದಲ್ಲಿ ಸ್ವಾತಂತ್ರ್ಯೋತ್ಸವ

Update: 2024-08-20 15:12 IST

ಉಳ್ಳಾಲ: ಮುಹ್ಯಿದ್ದೀನ್ ಜುಮಾ ಮಸ್ಜಿದ್ ಹಾಗೂ ರಹ್ಮಾನಿಯ್ಯ ಮದ್ರಸದ ಇದರ ವತಿಯಿಂದ 78ನೇಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಜಮಾಅತ್ ಅಧ್ಯಕ್ಷ ಜಾಫರ್ ಧ್ವಜಾರೋಹಣ ನೆರವೇರಿಸಿದರು. ಅವರ ಅಧ್ಯಕ್ಷತೆಯಲ್ಲಿ ಮದ್ರಸ ಮುಖ್ಯೋಪಾಧ್ಯಯರಾದ ಹನೀಫ್ ಸಅದಿ ಅಲ್ ಫುರ್‌ಖಾನಿ ಬದ್ಯಾರ್ ಉದ್ಘಾಟಿಸಿದರು. ಖತೀಬ್ ಹಾಫಿಳ್ ಹಸನ್ ಮುಬಾರಕ್ ಸಖಾಫಿ ಅಲ್ ಪುರ್‌ಖಾನಿ ಪುಂಜಾಲಕಟ್ಟೆ ದುಆ ನಡೆಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಅಧ್ಯಾಪಕರುಗಳಾದ ಅಬ್ದುಲ್ ಹಮೀದ್ ಮದನಿ ಬದ್ಯಾರ್, ಕೆ.ಎಚ್. ಇಸ್ಮಾಈಲ್ ಮುಸ್ಲಿಯಾರ್ ಅಡ್ಕರೆಪಡ್ಪು, ಜಮಾಅತ್ ಪ್ರಧಾನ ಕಾರ್ಯದರ್ಶಿ ಮುಸ್ತಫ, ಕೋಶಾಧಿಕಾರಿ ಬಿ.ಕೆ. ಮುಹಮ್ಮದ್, ಉಸ್ತುವಾರಿ ಎ.ಬಿ. ಹುಸೈನ್ ಹಾಗೂ ಜಮಾಅತಿನ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರುಗಳು ಉಪಸ್ಥಿತರಿದ್ದರು.

ಅಧ್ಯಾಪಕರಾದ ಎಂ. ಮುಸ್ತಫಾ ಸಅದಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News