×
Ad

ಪೋರ್ಟ್ ವಾರ್ಡ್ ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2024-08-16 17:29 IST

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಕಂದಕ್ ಪರಿಸರದಲ್ಲಿ ಪೋರ್ಟ್ ವಾರ್ಡ್ ಫ್ರೆಂಡ್ಸ್ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಸೀರೆ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಕಂದಕ್ ಮುಸ್ಲಿಂ ಜಮಾತ್(ರಿ) ಸಂಸ್ಥೆಗೆ ನೂತನವಾಗಿ ಆ್ಯಂಬ್ಯುಲೆನ್ಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು.

ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್ ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಉಪವಿಭಾಗ ಸಹಾಯಕ ಆಯಕ್ತರಾದ ಹರ್ಷವರ್ಧನ ಎಸ್. ಜೆ, ಮಂಗಳೂರು ತಾಲೂಕಿನ ಉಪ ತಹಶೀಲ್ದಾರರಾದ ಎಂ.ಟಿ. ಭೀಮಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ವೇತಾ ಎನ್, ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಮಂಗಳೂರು ದಕ್ಷಿಣ ಪಾಂಡೇಶ್ವರ ಪೋಲಿಸ್ ನಿರೀಕ್ಷಕರಾದ ಗುರುರಾಜ್, ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್(ರಿ) ಅಧ್ಯಕ್ಷರಾದ ಸೀತರಾಮ್ ಎ, ಕಾರ್ಮೆಲ್ ಸ್ಕೂಲ್ ಆಡಳಿತಾಧಿಕಾರಿ ಡಾ| ಮಾರಿ ಪ್ರೇಮ್ ಡಿಸೋಜಾ ಎ.ಸಿ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಜಿ.ಹನುಮಂತ ಕಾಮತ್ ಹಾಗೂ ಸ್ಥಳೀಯವರು ಬಾಗಿಯಾದರು.

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News