×
Ad

ಡಿ.25ರಿಂದ ಮಂಗಳೂರು-ನವಿ ಮುಂಬೈ ನಡುವೆ ಇಂಡಿಗೋದಿಂದ ಪ್ರತಿದಿನ ನೇರ ವಿಮಾನ ಸೇವೆ

Update: 2025-11-29 21:00 IST

ಮಂಗಳೂರು, ನ.29: ಭಾರತದ ಅತ್ಯಾಧುನಿಕ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವಾಗಿರುವ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಡಿ.25 ರಂದು ಕಾರ್ಯಾರಂಭಗೊಳ್ಳಲಿದ್ದು, ಅದೇ ದಿನ ಮಂಗಳೂರು-ನವಿ ಮುಂಬೈ ನಡುವೆ ಇಂಡಿಗೋದ ವಿಮಾನದ ಸೇವೆ ಆರಂಭಗೊಳ್ಳಲಿದೆ.

ಇದರೊಂದಿಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಸಂಪರ್ಕ ಮತ್ತಷ್ಟು ಸುಗಮಗೊಳ್ಳಲಿದೆ.

ಪ್ರತಿದಿನ ನೇರ ಈ ಹೊಸ ಸೇವೆಯೊಂದಿಗೆ ಮಂಗಳೂರು -ಮುಂಬೈ ನಡುವೆ ಪ್ರಯಾಣಿಕರಿಗೆ ದಿನಕ್ಕೆ ಒಟ್ಟು ಐದು ನೇರ ವಿಮಾನಗಳ ಸೇವೆ ಲಭ್ಯವಾಗಲಿದೆ. ಇವುಗಳಲ್ಲಿ ನಾಲ್ಕು ವಿಮಾನಗಳನ್ನು ಇಂಡಿಗೋ ಮತ್ತು ಒಂದು ವಿಮಾನವನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ವಹಿಸಲಿವೆ.

ಪ್ರಸ್ತುತ ಮಂಗಳೂರು ಅಂತಎರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದಿಲ್ಲಿ, ಹೈದರಾಬಾದ್, ಮುಂಬೈ ಮತ್ತು ತಿರುವನಂತಪುರಕ್ಕೆ ಸಂಪರ್ಕವಿದೆ. ನವಿ ಮುಂಬೈ ಏಳನೇ ದೇಶೀಯ ಗಮ್ಯಸ್ಥಾನವಾಗಿ ಸೇರ್ಪಡೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News