×
Ad

ಕಡಬ: ಅಕ್ರಮ ಕಸಾಯಿಖಾನೆಗೆ ದಾಳಿ; ಮಾಂಸ ಸಹಿತ ಇಬ್ಬರ ಬಂಧನ

Update: 2024-09-07 13:13 IST

ಕಡಬ: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕಡಬ ಪೋಲಿಸರು ಮಾಂಸ ಸಹಿತ ಇಬ್ಬರನ್ನು ಬಂಧಿಸಿದ ಘಟನೆ ಕುಟ್ರುಪಾಡಿ ಗ್ರಾಪಂ ವ್ಯಾಪ್ತಿಯ ಕಾರ್ಕಳ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಬಂಧಿತರನ್ನು ಬಿನೋಯ್ ಹಾಗೂ ಕುಟ್ಟಪ್ಪನ್ ಎಂದು ಗುರುತಿಸಲಾಗಿದೆ. ಕುಟ್ರುಪ್ಪಾಡಿಯ ಮನೆಯೊಂದರಲ್ಲಿ ಜಾನು ವಾರು ವಧೆ ಮಾಡುತ್ತಿರುವ ಕುರಿತ ಮಾಹಿತಿ ಮೇರೆಗೆ ಕಡಬ ಠಾಣಾ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭ ಸ್ಥಳದಲ್ಲಿ ಗೋವಧೆ ಮಾಡಲು ಬಳಸಿದ ಸಾಧನ, ದನದ ರುಂಡ, ಸುಮಾರು 70 ಕೆ.ಜಿ. ಮಾಂಸ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News