×
Ad

ಕಲ್ಲಾಪು: ಮಾರುಕಟ್ಟೆ ಗೆ ಬೆಂಕಿ, ಅಪಾರ ನಷ್ಟ

Update: 2024-06-10 08:08 IST

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ಗ್ಲೋಬಲ್ ಮಾರುಕಟ್ಟೆ ಗೆ ಬೆಂಕಿ ಹಿಡಿದ ಪರಿಣಾಮ ‌ಕೆಲವು ಅಂಗಡಿಗಳ ಸಾಮಗ್ರಿಗಳು ಬೆಂಕಿಗಾಹುತಿಯಾಗಿರುವ ಘಟನೆ ಭಾನುವಾರ ಮುಂಜಾನೆ 4 ಗಂಟೆ ವೇಳೆಗೆ ನಡದಿರುವ ಬಗ್ಗೆ ವರದಿಯಾಗಿದೆ.  

ಮಾರುಕಟ್ಟೆ ಮೇಲೆ ಹಾಕಲಾಗಿದ್ದ ಶೀಟು, ಅಂಗಡಿಗಳಲ್ಲಿ ಆಹಾರ ಸಾಮಗ್ರಿ ಶೇಖರಣೆ ಮಾಡಿಕೊಡುವ ಕಪಾಟು, ಟೇಬಲ್ ಫ್ರೂಟ್ಸ್, ನಗದು ಸಹಿತ ಇತರ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿದ್ದು,   ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಅಧಿಕಾರಿಗಳು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. 

ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News