×
Ad

ಕಿನ್ಯ ಗ್ರಾ. ಪಂ.: ಅಧ್ಯಕ್ಷರಾಗಿ ಮಾಲಿನಿ, ಉಪಾಧ್ಯಕ್ಷರಾಗಿ ಫಾರೂಕ್ ಕಿನ್ಯ ಆಯ್ಕೆ

Update: 2023-08-18 22:55 IST

ಉಳ್ಳಾಲ: ಕಿನ್ಯ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮಾಲಿನಿ ಮತ್ತು ಉಪಾಧ್ಯಕ್ಷರಾಗಿ ಫಾರೂಕ್ ಕಿನ್ಯ ಅವಿರೋಧವಾಗಿ ಆಯ್ಕೆಯಾದರು.

ಪಂಚಾಯತಿಯ 12ಸ್ಥಾನಗಳ ಪೈಕಿ ಕಾಂಗ್ರೆಸ್ 7, ಎಸ್ಡಿಪಿಐ 4, ಹಾಗೂ ಬಿಜೆಪಿ 1, ಬೆಂಬಲಿತ ಸದಸ್ಯರಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಉಳಿದ ಪಕ್ಷದ ಸದಸ್ಯರು ನಾಮಪತ್ರ ಸಲ್ಲಿಕೆ ಮಾಡದ ಕಾರಣ ಅವಿರೋಧ ಆಯ್ಕೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಚುನಾವಣಾಧಿಕಾರಿಯಾಗಿದ್ದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎನ್ ಎಸ್ ಕರೀಂ, ಜಿಲ್ಲಾ ಅಲ್ಪ ಸಂಖ್ಯಾತ ಕಾಂಗ್ರೆಸ್ ಉಪಾಧ್ಯಕ್ಷ ಮೊಯಿದಿನ್ ಕುಂಞಿ, ಕಿನ್ಯ ಕೇಂದ್ರ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಜಿಲ್ಲಾ ಮದರಸ ಮೈನೇಜ್ ಮೆಂಟ್ ಉಪಾಧ್ಯಕ್ಷ ಅಬೂಸಾಲಿ ಹಾಜಿ, ಪಂಚಾಯತ್ ಮಾಜಿ ಉಪಾಧ್ಯಕ್ಷ ಸಿರಾಜುದ್ದೀನ್ ಕಿನ್ಯ, ಕಿನ್ಯ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್, ಕಾರ್ಯದರ್ಶಿ ಶೇಕ್ ಇಬ್ರಾಹಿಂ ಕಿನ್ಯ, ಪಂಚಾಯತ್ ಸದಸ್ಯ ಫಯಾಝ್ ಶುಭ ಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News