×
Ad

ಕೊಣಾಜೆ: ಬಾವಿಗೆ ಬಿದ್ದ ಒಂದೂವರೆ ವರ್ಷದ ಮಗು; ಜೀವ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ಯುವಕರು

Update: 2025-10-27 19:55 IST

ಕೊಣಾಜೆ: ಬೆಳ್ಮ ಸಮೀಪದ ಮಾರಿಯಮ್ಮಗೋಳಿ ಎಂಬಲ್ಲಿ ಮನೆಯಂಗಳದಲ್ಲಿ ಆಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಆಕಸ್ಮಿಕವಾಗಿ ಮನೆ ಸಮೀಪದ‌ ಬಾವಿಗೆ ಬಿದ್ದ ಘಟನೆ ರವಿವಾರ ಸಂಜೆ ಸಂಭವಿಸಿದ್ದು, ಕೂಡಲೇ ಮಗುವಿನ ಚಿಕ್ಮಪ್ಪ ಹಾಗೂ ಸ್ಥಳೀಯ ಯುವಕ ಬಾವಿಗಿಳಿದು ಮಗುವಿನ ಪ್ರಾಣ ರಕ್ಷಣೆ ಮಾಡಿದ್ದಾರೆ.

ಮಗು ಆಡುತ್ತಾ ಅಂಗಳ ಸಮೀಪದ ಬಾವಿಗೆ ಬಿದ್ದಿದ್ದು ಕೂಡಲೇ ಮನೆ ಮಂದಿ ಬೊಬ್ಬೆ ಹಾಕಿದಾಗ ಮಗುವಿನ ಚಿಕ್ಮಪ್ಪ ಜೀವನ್ ಬಾವಿಗೆ ದುಮುಕಿದ್ದು, ಬಳಿಕ ಸ್ಥಳೀಯ ಯುವಕ ವಿವೇಕ್ ಪೂಜಾರಿ ಬಾವಿಗಿಳಿದು ಮಗುವನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಸಾಹಸ ಮೆರೆದ ಮಗುವಿನ ಚಿಕ್ಕಪ್ಪ ಹಾಗೂ ಸ್ಥಳೀಯ ಯುವಕನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News