×
Ad

ಕೊಣಾಜೆ: ಗ್ರೀನ್ ವೀವ್ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Update: 2024-01-26 14:15 IST

ಮಂಗಳೂರು: ಅಡ್ಕರೆಪಡ್ಪು ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ  ಗಣರಾಜ್ಯೋತ್ಸವ ಆಚರಿಸಲಾಯಿತು.

ಧ್ವಜಾರೋಹಣವನ್ನು  ಅಮೀರ್ ಮುಹಮ್ಮದ್ ಮನ್ಸೂರ್ ಅವರು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಪರ್ವೇಜ್ ಅಲಿ ಯವರು ವಹಿಸಿದ್ದರು. ಪ್ರಾಂಶುಪಾಲರಾದ ಕೆ. ಅಬೂಬಕ್ಕರ್ ರವರು ಸ್ವಾಗತಿಸಿದರು.

ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಪದಾಧಿಕಾರಿಗಳಾದ ಇಮ್ತಿಯಾಝ್ ಖತೀಬ್, ಅಬ್ದುಲ್ ಗಫೂರ್, ಮೊಹಿದಿನ್ ಅಹ್ಮದ್, ಸೈಫುಲ್ಲಾಹ್, ಆಡಳಿಧಿಕಾರಿ ಜಮಾಲುದ್ದೀನ್, ಎಸ್ ಬಿಸಿ ಅಧ್ಯಕ್ಷ ಹಸೈನಾರ್ ಎ.ಬಿ, ಮುಖ್ಯ ಶಿಕ್ಷಕಿಯರಾದ ನಮಿತಾ ಬಿ. ಎನ್. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗಾಗಿ ಭಾಷಣ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಾರ್ಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎವಿಲ್ಯನ್ ಪಿ. ಐಮನ್ ಧನ್ಯವಾದ ಸಲ್ಲಿಸಿದರು.

ಎನ್ಆರ್ ಸಿಸಿ ರಿಯಾದ್ ಘಟಕದವರಿಂದ  ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಲಾಯಿತು. ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ಅಬ್ದುಲ್ ಸಲಾಂ ನಿರೂಪಿಸಿದರು.

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News