ಕೂರತ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಬೂಬಕ್ಕರ್‌ರಿಗೆ ಸನ್ಮಾನ
Update: 2023-09-29 22:57 IST
ಮಂಗಳೂರು: ಕೂರತ್ ಅಲ್ ಫಝಲ್ ಜುಮಾ ಮಸ್ಜಿದ್ ನ ಸತತ 32 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಬೂಬಕ್ಕರ್ ಅವರನ್ನು ಯನೈಟೆಡ್ ಬರೆಪ್ಪಾಡಿ ವತಿಯಿಂದ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಹನೀಫ್ ಫಾಳಿಲಿ, ಲತೀಫ್ ಮುಸ್ಲಿಯಾರ್, ಸಿರಾಜುದ್ದೀನ್ ಹಿಮಮಿ, ಇಲ್ಯಾಸ್ ಅಂಜದಿ ಉಪಸ್ಥಿತರಿದ್ದರು.