×
Ad

ಡಿ.14ರಂದು ‘ಲತಾ ಕೆ ಆವಾಜ್ ಶೋಭಾ ಕೆ ಸಾಥ್’ ಸಂಗೀತ ಕಾರ್ಯಕ್ರಮ

Update: 2025-12-11 14:11 IST

ಮಂಗಳೂರು, ಡಿ.11: ಸಿಂಚನಾ ಮೆಲೊಡಿಸ್ ತಂಡದ ವತಿಯಿಂದ ಡಿ.14ರಂದು ಸಂಜೆ 5 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಲತಾಕಿ ಆವಾಜ್ ಶೋಭಾ ಕೆ ಸಾಥ್’ ಎಂಬ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಗುರುವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಮುಖ್ಯಸ್ಥೆ ಶೋಭಾ ಭಾಸ್ಕರನ್, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ ಆಯ್ದ 24 ಸೋಲೋ ಮತ್ತು ಡುಯೆಟ್ ಹಿಂದಿ ಹಾಡುಗಳನ್ನು ತಂಡದ ಒಟ್ಟು 10 ಗಾಯಕರು ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಹಾಡುಗಳ ಮಧ್ಯೆ ಒಂದೆರಡು ನೃತ್ಯ ಕಾರ್ಯಕ್ರಮಗಳು ಇರಲಿವೆ. ಸಂಗೀತತಜ್ಞ, ಗುರು ರೋಶನ್ ಫ್ರಾನ್ಸಿಸ್ ಮಾರ್ಟಿಸ್ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಹುಸೈನ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಲಿದ್ದಾರೆ. ಲಯನ್ಸ್ ಜಿಲ್ಲಾ ಗವರ್ನರ್ ಕುಡುಪಿ ಅರವಿಂದ್ ಶೆಣೈ, ದ.ಕ ಜಿಲ್ಲಾ ಕೇರಳ ಸಮಾಜಂ ಅಧ್ಯಕ್ಷ ಟಿ.ಕೆ ರಾಜನ್, ದ.ಕ, ಜಿಲ್ಲಾ ಸಂಗೀತಗಾರರ ಒಕ್ಕೂಟದ ಅಧ್ಯಕ್ಷ ಧನ್‌ರಾಜ್, ಉದ್ಯಮಿ ಜಯಶ್ ಅವರು ಭಾಗವಹಿಸಲಿದ್ದಾರೆ ಎಂದರು.

ದೀಪಕ್ -ಕೀಬೋರ್ಡ್, ಜಯನ್ -ಕೊಳಲು, ಪ್ರತಾಪ್ ಆಚಾರ್ಯ - ರಿದಂ ಪ್ಯಾಡ್, ಪ್ರಜ್ವಲ್ -ತಬಲ, ರಾಜ್‌ಗೋಪಾಲ್ -ಗಿಟಾರ್ ನಲ್ಲಿ ಸಹಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದರು.

ಗಾಯಕರಾದ ಮನೋಜ್ ಕುಮಾರ್, ನೌಷಾದ್, ಆಸೀಫ್, ಸುರೇಶ್ ಬಂಗೇರ, ಸಲಾವುದ್ದೀನ್ ಸಲಾಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News