×
Ad

ಮಂಗಳೂರು: ಪಡೀಲ್ ಅಂಡರ್‌ಪಾಸ್‌ನಲ್ಲಿ ಅಪಘಾತ; ಯುವಕ ಮೃತ್ಯು, ಇಬ್ಬರಿಗೆ ತೀವ್ರ ಗಾಯ

Update: 2023-09-14 20:02 IST

ಭವಿನ್ ರಾಜ್

ಮಂಗಳೂರು, ಸೆ.14: ನಗರದ ಪಡೀಲ್ ಅಂಡರ್ ಪಾಸ್‌ನಲ್ಲಿ ಗುರುವಾರ ನಡೆದ ರಸ್ತೆ ಅಫಘಾತದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿರುವುದಾಗಿ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತಪಟ್ಟ ಯುವಕನನ್ನು ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ ಭವಿನ್ ರಾಜ್ (20) ಎಂದು ಗುರುತಿಸಲಾಗಿದೆ. ಗಾಡ್ವಿನ್ (19) ಮತ್ತು ಆಶಿತ್ 17) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಕಲಿಯುತ್ತಿದ್ದ ಭವಿನ್‌ ರಾಜ್ ಗುರುವಾರ ಮಧ್ಯಾಹ್ನ ತನ್ನ ಗೆಳೆಯರ ಜತೆ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಪಡೀಲ್ ಅಂಡರ್‌ಪಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ಅಂಡರ್‌ಪಾಸ್ ಫುಟ್‌ಪಾತ್‌ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಇದರಿಂದ ಮೂವರು ಕೂಡ ಗಾಯಗೊಂಡಿದ್ದು, ಈ ಪೈಕಿ ಭವಿನ್‌ ರಾಜ್ ಮೃತಪಟ್ಟಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News