×
Ad

ಮಂಗಳೂರು | BITಯಲ್ಲಿ ‘AI ಸ್ಪಾರ್ಕಥಾನ್ 2025’ ಕಾರ್ಯಕ್ರಮ

Update: 2025-12-04 11:06 IST

ಮಂಗಳೂರು: BIT–ADVA ಸಹಯೋಗದೊಂದಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್ ವಿಭಾಗವು ಡಿ. 1 ಮತ್ತು 2ರಂದು BITಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ‘AI ಸ್ಪಾರ್ಕಥಾನ್ 2025’ ಹ್ಯಾಕಥಾನ್‌ಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಮೊದಲ ದಿನ ತಂಡಗಳು ತಮ್ಮ ಮೂಲಮಾದರಿಗಳನ್ನು ಅಭಿವೃದ್ಧಿಪಡಿಸಿದ್ದು, ಎರಡನೇ ದಿನ ಅದನ್ನು ಪ್ರಸ್ತುತಪಡಿಸಿದರು.

ಸೈಬರ್ ಸೆಕ್ಯುರಿಟಿ ಮತ್ತು ಬ್ಲಾಕ್‌ಚೈನ್, ಕ್ಲೌಡ್ ಮತ್ತು ಸ್ಮಾರ್ಟ್ ಮೂಲ ಸೌಕರ್ಯ, ಆರೋಗ್ಯ ರಕ್ಷಣೆಯಲ್ಲಿ AI, ಸ್ಮಾರ್ಟ್ ಸೇವೆಗಳು ಮತ್ತು ಹ್ಯೂಮನ್ ಎಕ್ಸಪೀರಿಯೆನ್ಸ್ ಸೇರಿದಂತೆ ವಿವಿಧ ವಿಷಯಗಳ ಅಡಿಯಲ್ಲಿ ಒಟ್ಟು 16 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು.

ಡಿಸೆಂಬರ್ 3ರಂದು ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ. ಎಸ್.ಐ. ಮಂಝೂರ್ ಬಾಷಾ ಅವರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ವಿವರಿಸಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

AI&DS ವಿಭಾಗದ ಮುಖ್ಯಸ್ಥರಾದ ಡಾ. ಮೆಹಬೂಬ್ ಮುಜಾವರ್ ಅವರು ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಪೇಟೆಂಟ್‌ಗಳ ಮಹತ್ವವನ್ನು ಒತ್ತಿಹೇಳಿದರು. BIT–ADVA ಸಂಯೋಜಕರ ಶ್ರಮವನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳಿಕೆಯನ್ನು ಅವರು ಅಭಿನಂದಿಸಿದರು.

ಸ್ಪರ್ಧೆಯಲ್ಲಿ WaitNot ತಂಡದ ‘ಡಿಜಿಟಲ್ ರೆಸ್ಟೋರೆಂಟ್ ಆರ್ಡರಿಂಗ್ ಸೊಲ್ಯೂಷನ್’ ಪ್ರಥಮ ಬಹುಮಾನಕ್ಕೆ ಆಯ್ಕೆಯಾಯಿತು. ವೈಯಕ್ತಿಕ ಕಲಿಕೆ ಮತ್ತು ವೃತ್ತಿ ಮಾರ್ಗದರ್ಶನ ರೂಪಿಸಿದ ಸ್ಮಾರ್ಟ್ ಪಾತ್‌ವೇಸ್ ತಂಡ ದ್ವಿತೀಯ ಬಹುಮಾನ ಪಡೆದಿದೆ. AI ಚಾಲಿತ ವರ್ಚುವಲ್ ಸಂದರ್ಶನಕಾರ ‘ಇಂಟರ್ವಿಸ್ಟಾ’ ಪ್ರದರ್ಶಿಸಿದ ತಂಡ ತೃತೀಯ ಬಹುಮಾನ ಪಡೆದಿದೆ.

ಡಾ. ಮೆಹಬೂಬ್ ಮುಜಾವರ್, ಪ್ರೊ. ಮಸೂದಾ, ಹುಝೈನಾ ಮತ್ತು ಮರಿಯತ್ ಶಬ್ನಮ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಹುಝೈನಾ ವಂದಿಸಿದರು.




 





 



 



 



 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News