×
Ad

ಮಂಗಳೂರು: ಕಾರು ಕಳವು ಪ್ರಕರಣ; 27 ವರ್ಷದ ಬಳಿಕ ಆರೋಪಿ ಸೆರೆ

Update: 2023-08-27 21:35 IST

ಮಂಗಳೂರು, ಆ.27: ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 27 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕಲ್ಲಿಕೋಟೆಯ ಮನೋಜ್ (52) ಬಂಧಿತ ಆರೋಪಿಯಾಗಿದ್ದಾನೆ.

ಅಶೋಕ ನಗರದ ವಿನ್ಸೆಂಟ್ ಪಿರೇರಾ ಎಂಬವರಿಗೆ ಸೇರಿದ ಕಾರನ್ನು ಅದರ ಚಾಲಕ ದಾಮೋದರ ಎಂಬವರು ಕೊಟ್ಟಾರದ ರಸ್ತೆ ಬದಿ 1996ರ ಡಿಸೆಂಬರ್ 24ರಂದು ಪಾಕ್ ಮಾಡಿದ್ದು, ಮರುದಿನ ನೋಡಿದಾಗ ಅದು ಕಾಣೆಯಾಗಿತ್ತು. ಈ ಬಗ್ಗೆ ಮರುದಿನ ವಿನ್ಸೆಂಟ್ ಪಿರೇರಾ ದೂರು ನೀಡಿದ್ದರು.

ಈ ಕಾರನ್ನು ಕಳವುಗೈದಿದ್ದ ಆರೋಪಿ ಮನೋಜ್ ಎಂಬಾತ ಕಲ್ಲಿಕೋಟೆಯಲ್ಲಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಉರ್ವ ಪೊಲೀಸರು ಆಗಸ್ಟ್ 23ರಂದು ಕಲ್ಲಿಕೋಟೆಯಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ 27 ವರ್ಷದಿಂದ ತಲೆಮರೆಸಿಕೊಂಡಿದ್ದ ಈತನನ್ನು ಆಗಸ್ಟ್ 24ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News