×
Ad

ಮಂಗಳೂರು: ಪಾವನಿ ಸಿಲ್ಕ್ಸ್ ಟೆಕ್ಸ್‌ಟೈಲ್ಸ್ ಶುಭಾರಂಭ

Update: 2025-04-21 13:43 IST

ಮಂಗಳೂರು, ಎ.21: ನಗರದ ಭವಂತಿ ಸ್ಟ್ರೀಟ್‌ನ ಮಹಾಲಕ್ಷ್ಮೀ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಪಾವನಿ ಸಿಲ್ಕ್ಸ್ ಮತ್ತು ಟೆಕ್ಸ್‌ಟೈಲ್ಸ್ ಸಂಸ್ಥೆಯ ಮಂಗಳೂರಿನ 2ನೇ ಮಳಿಗೆ ಸೋಮವಾರ ಶುಭಾರಂಭಗೊಂಡಿತು.

ದೈವಜ್ಞ ಕೆ.ಸಿ.ನಾಗೇಂದ್ರ ಭಾರದ್ವಾಜ್ ಉದ್ಘಾಟಿಸಿದರು. ಪುಟಾಣಿಗಳು ದೀಪ ಬೆಳಗಿಸಿದರು.

 

ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು,  ಸ್ಪರ್ಧಾತ್ಮಕ ಯುಗದಲ್ಲಿ ವ್ಯಾಪಾರ ಸವಾಲು ಆಗಿದೆ. ಸರಕಾರದ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಬಟ್ಟೆ ವಿನ್ಯಾಸದಲ್ಲಿ ನಿರಂತರ ಬದಲಾವಣೆ ವ್ಯಾಪಾರಿಗಳಿಗೆ ಸವಾಲಾಗಿದೆ. ಕಠಿಣ ಪರಿಶ್ರಮ, ಗ್ರಾಹಕರಿಗೆ ಸಂತೃಪ್ತಿಯ ಸೇವೆ, ಉತ್ತಮ ಸಿಬ್ಬಂದಿಗಳ ಮೂಲಕ ವಾಪಾರದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದ ಅವರು ಕರಾವಳಿಯಲ್ಲಿ ಪಾವನಿ ಇನ್ನೂ 10 ಶಾಖೆಗಳು ಉದಯಿಸಲಿ ಎಂದು ಹಾರೈಸಿದರು.

ದೈವಜ್ಞ ಕೆ.ಸಿ.ನಾಗೇಂದ್ರ ಭಾರದ್ವಾಜ್ ಶುಭ ಹಾರೈಸಿ,  ಸಂಸ್ಥೆಯ ಪಾಲುದಾರರಾದ ಹೈದರ್ ಪಾವನಿ, ಗೌತಮ್ ಬಂಗೇರ, ಇಬ್ರಾಹಿಂ, ನರಸಿಂಹ, ನಾಗೇಶ್ ಅವರು ಪಾವನಿ ಸಂಸ್ಥೆಯನ್ನು ಕಟ್ಟಿ, ಒಗ್ಗಟ್ಟಿನಿಂದ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಬೋಳಾರ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಮ್ ಜಮಾಅತ್‌ನ ಖತೀಬ್ ಬಿ.ಕೆ.ಇಲ್ಯಾಸ್ ಬಾಖವಿ ಆಶೀರ್ವಚನ ನೀಡಿ‘ ಪಂಚಮಂ ಕಾರ್ಯ ಸಿದ್ಧಿ ಎಂಬಂತೆ ಐವರು ಸೌಹಾರ್ದತೆಯಿಂದ ಪಾವನಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಜಾತಿ ಧರ್ಮಕ್ಕೆ ಕಚ್ಚಾಡುತ್ತಿರುವ ಪರಿಸ್ಥಿತಿಯಲ್ಲಿ ಈ ಐವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ವಕೀಲರಾದ ದಯಾನಂದ ರೈ ಅವರು ಮಾತನಾಡಿ, ‘ಸಂಸ್ಥೆಯ ಮಾಲಕರು ಉತ್ತಮ ಸಂಸ್ಕಾರವನ್ನು ಹೊಂದಿರುವರು. ಅವರ ಮೂಲಕ ಸಂಸ್ಥೆ ಅತ್ಯುತ್ತಮವಾಗಿ ಬೆಳೆಯುತ್ತದೆ ಎಂದು ಹೇಳಿದರು.

ವಕೀಲರಾದ ಅಬ್ದುಲ್ ಖಾದರ್ ಇಡ್ಯಾ ಮಾತನಾಡಿ, ‘ವ್ಯಾಪಾರ ಆರಂಭಿಸುವುದು ದೊಡ್ಡ ಸವಾಲು ಆಗಿದ್ದು, 18 ಇಲಾಖೆಗಳೊಂದಿಗೆ ವ್ಯವಹರಿಸಬೇಕಾಗುತ್ತದೆ ಎಂದರು.

ಐಸಿವೈಎಂ ನಿರ್ದೇಶಕ ರೆ. ಫಾ.ಅಶ್ವಿನ್ ಕಾರ್ಡೋಝ ಆಶೀರ್ವಚನ ನೀಡಿದರು.

ಕಟ್ಟಡದ ಮಾಲಕರಾದ ರವೀಂದ್ರ ನಿಕಂ, ಅರುಣ್ ನಿಕಂ, ದ.ಕ. ಟೆಕ್ಸ್‌ಟೈಲ್ಸ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಯಶವಂತ್ ವಿ. ರಾವಲ್, ಬಾಲಣ್ಣ ತಮಿಳುನಾಡು, ಗುತ್ತಿಗೆದಾರರಾದ ಶರತ್ ಚಂದ್ರ, ಅನೂಪ್ ಬಂಗೇರ, ದೀಕ್ಷಿತ್ ರಾಜ್ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಪಾಲುದಾರರಾದ ಹೈದರ್ ಪಾವನಿ, ಗೌತಮ್ ಬಂಗೇರ, ಇಬ್ರಾಹೀಂ, ನರಸಿಂಹ, ನಾಗೇಶ್ ಅತಿಥಿಗಳನ್ನು ಸ್ವಾಗತಿಸಿದರು. ಚೇತನ್ ಪಿಲಿಕುಳ ಕಾರ್ಯಕ್ರಮ ನಿರ್ವಹಿಸಿದರು.

ಎ.21ರಿಂದ 30ರವರೆಗೆ ಶೇ 10ರಷ್ಟು ರಿಯಾಯತಿ:

ನೂತನ ಮಳಿಗೆಯಲ್ಲಿ ಮದುವೆ, ನಿಶ್ಚಿತಾರ್ಥ ಸೇರಿದಂತೆ ಶುಭ ಸಮಾರಂಭ ಹಾಗೂ ಇತರ ಎಲ್ಲಾ ಸಂದರ್ಭಗಳಿಗೆ ಪೂರಕವಾದ ಬಟ್ಟೆಬರೆಗಳ ಅಪೂರ್ವ ಸಂಗ್ರಹ ಲಭ್ಯ. ಸಂಸ್ಥೆಯ 10ನೇ ವಾರ್ಷಿಕೋತ್ಸವ ಮತ್ತು ಹೊಸ ಶಾಖೆಯ ಉದ್ಘಾಟನೆ ಪ್ರಯುಕ್ತ ಎ.21ರಿಂದ 30ರವರೆಗೆ ಎಲ್ಲಾ ಬಟ್ಟೆಗಳ ಮೇಲೆ ಶೇ.10ರಷ್ಟು ವಿಶೇಷ ರಿಯಾಯಿತಿ ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Delete Edit

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News