×
Ad

ಮಂಗಳೂರು | ಯೆನೆಪೋಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ

Update: 2025-11-16 17:55 IST

ಮಂಗಳೂರು, ನ.16: ಯೆನೆಪೊಯ ಶಾಲೆ ಮತ್ತು ಮಂಗಳೂರು ಕ್ವಿಝಿಂಗ್ ಫೌಂಡೇಶನ್ ಸಹಯೋಗದೊಂದಿಗೆ ಮಂಗಳೂರು ಮತ್ತು ಉಡುಪಿಯ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಅಂತರ್ ಕಾಲೇಜು ಮತ್ತು ಅಂತರ್‌ಶಾಲಾ ರಸಪ್ರಶ್ನೆ ಸ್ಪರ್ಧೆ ಯೆನೆಕ್ವಿಝ್ ನ.14 ಮತ್ತು 15 ರಂದು ಶಾಲಾ ಆವರಣದಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ಮಂಗಳೂರು ಮತ್ತು ಉಡುಪಿಯ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆ 5 ರಿಂದ 8ನೇ ತರಗತಿಯವರೆಗಿನ ವಿಭಾಗದ ಸ್ಪರ್ಧೆಯಲ್ಲಿ ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ ಅದ್ವೈತ್ ಟಿ. ಪಡಿಯಾರ್ ಮತ್ತು ಪ್ರಣವ್ ಕೋಟೆಕರ್ ಪ್ರಥಮ ಸ್ಥಾನ ಪಡೆದರು.

ಮಂಗಳೂರಿನ ಪಣಂಬೂರಿನ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಕೆ. ಅಭಯ್ ನಾಯರ್ ಮತ್ತು ಸೋನಿತ್ ಶೆಟ್ಟಿ ಕಿದೂರ್ ದ್ವಿತೀಯ ಸ್ಥಾನ ಪಡೆದರು.

ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಶಾಲೆಯ ಸೃಜನ್ ಎನ್.ವೈ ಮತ್ತು ವಿಭವ್ ಕಲ್ಕೂರಾ ತೃತೀಯ ಸ್ಥಾನ ಪಡೆದರು.

ಎರಡನೇ (9- 12) ವಿಭಾಗದಲ್ಲಿ ಬ್ರಹ್ಮಾವರದ ಲಿಟಲ್ ರಾಕ್ ಶಾಲೆಯ ಸ್ಕಂದ ಜೆ.ಶೆಟ್ಟಿ ಮತ್ತು ತಕ್ಷಕ್ ಶೆಟ್ಟಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದರು. ಸಿಎಫ್‌ಎಎಲ್‌ನ ವಿದ್ಯುತ್ ಅಜಿತ್ ಸೋಮನ್ ಮತ್ತು ಶಾಂತನು ವೈಭವ್ ಅನೀಶ್ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು, ಸೈಂಟ್ ಥೆರೆಸಾದ ಶನ್ನಾರ ಕಡಿದಾಲ್ ಮತ್ತು ಸುಮೇಧ್ ರಾವ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಗಿಟ್ಟಿಸಿಕೊಂಡರು.

ಮಂಗಳೂರು ಕ್ವಿಝಿಂಗ್ ಫೌಂಡೇಶನ್ ಅಧ್ಯಕ್ಷ ಡಾ.ಅಣ್ಣಪ್ಪ ಕಾಮತ್, ಯೆನೆಪೊಯ ಶಾಲೆಯ ಅಸೋಸಿಯೇಟ್ ಡೈರೆಕ್ಟರ್ ಆಂಟನಿ ಜೋಸೆಫ್ ಯೆನೆಕ್ವಿಝ್ 2025 ವಿಜೇತರಿಗೆ ನಗದು ಬಹುಮಾನ ವಿತರಿಸಿದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News