ಮಂಗಳೂರು | ಹಿರಿಯ ನ್ಯಾಯವಾದಿ ಮುಹಮ್ಮದ್ ಅಲಿ ನಿಧನ
Update: 2025-11-24 10:07 IST
ಯು. ಮುಹಮ್ಮದ್ ಅಲಿ
ಮಂಗಳೂರು: ನಗರದ ಹಿರಿಯ ನ್ಯಾಯವಾದಿ, ಸಮಾಜ ಸೇವಕ ಯು. ಮುಹಮ್ಮದ್ ಅಲಿ (71) ಅವರು ಸೋಮವಾರ ಮುಂಜಾನೆ ಹೊಸದಿಲ್ಲಿಯಲ್ಲಿ ನಿಧನರಾದರು. ಇವರು ಮಂಗಳೂರು ವಕೀಲರ ಸಂಘದ ಹಿರಿಯ ಸದಸ್ಯರಾಗಿದ್ದರು.
ಜಡ್ಜ್ ಉಳ್ಳಾಲ ಹಮ್ಮಬ್ಬ ಅವರ ಪುತ್ರನಾದ ಮುಹಮ್ಮದ್ ಅಲಿ ಅವರು ಸಮಾಜ ಸೇವೆಯ ಜೊತೆಗೆ ಕೆಲಕಾಲ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಈ ಹಿಂದೆ ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಗೆಳೆಯರ ಜೊತೆಗೂಡಿ ಎರಡು ದಿನದ ಹಿಂದೆ ಪ್ರವಾಸ ಹೊರಟಿದ್ದ ಮುಹಮ್ಮದ್ ಅಲಿ ಅವರು ದೆಹಲಿಯಲ್ಲಿ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಮೃತದೇಹವು ಇಂದು ಸಂಜೆ ಮಂಗಳೂರು ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
ಮೃತ ಮುಹಮ್ಮದ್ ಅಲಿ ಅವರು ಮೂವರು ಹೆಣ್ಮಕ್ಕಳು, ಒಬ್ಬ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ಧಾರೆ.