×
Ad

ಮಂಗಳೂರು: ಗಾಂಜಾ ಸೇವನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಶಂಕೆ; ವ್ಯಕ್ತಿಗೆ ತಂಡದಿಂದ ಹಲ್ಲೆ

Update: 2023-11-01 22:24 IST

ಮಂಗಳೂರು, ನ.1: ಗಾಂಜಾ ಸೇವನೆ ಮಾಡಿದವನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಶಂಕೆಯಲ್ಲಿ ತಂಡವೊಂದು ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೀಷ್ ಹಲ್ಲೆಗೊಳಗಾದವರು. ಮನೀಷ್ ಮಣ್ಣಗುಡ್ಡೆಯಲ್ಲಿ ಮೀನು ವ್ಯಾಪಾರ ಕೆಲಸ ಮಾಡಿಕೊಂಡಿದ್ದು, ಅ.30ರಂದು ಕೆಲಸ ಮುಗಿಸಿ ಕಾಳಿ ಚರಣ್ ಫ್ರೆಂಡ್ಸ್ ಕ್ಲಬ್‌ನಲ್ಲಿ ಸ್ನೇಹಿತರೊಂದಿಗೆ ಮಾತನಾಡಿಕೊಂಡು ಅಲ್ಲಿಂದ ಮನೆಗೆ ತೆರಳುವ ಸಂದರ್ಭ ಅವರ ಪರಿಚಯದ ಅವಿನಾಶ್, ರೋಶನ್ ಕಿಣಿ ಮತ್ತು ಶಿವು ತಡೆದು ನಿಲ್ಲಿಸಿ ‘ಗಾಂಜಾ ಸೇವನೆಯ ಬಗ್ಗೆ ನೀನು ಪೊಲೀಸರಿಗೆ ಭಾರೀ ಮಾಹಿತಿ ನೀಡುತ್ತೀಯಾ?’ ಎನ್ನುತ್ತಾ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಅಲ್ಲದೆ ಫ್ರೆಂಡ್ಸ್ ಕ್ಲಬ್‌ನ ಬಾಗಿಲಿನ ಬೀಗ ಒಡೆದು ಹಾಕಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News